Monday, September 21, 2026

BDA Apartments

ಸಿಎಂ ಡಿಕೆಶಿ ಭೇಟಿ: ಅಸಮಾಧಾನದಿಂದಲೇ ಹೊರ ನಡೆದ ಬಸವರಾಜ ಹೊರಟ್ಟಿ? BDA JK_Adv BDA Adv
Home Front Page ಸಿಎಂ ಡಿಕೆಶಿ ಭೇಟಿ: ಅಸಮಾಧಾನದಿಂದಲೇ ಹೊರ ನಡೆದ ಬಸವರಾಜ ಹೊರಟ್ಟಿ?

ಸಿಎಂ ಡಿಕೆಶಿ ಭೇಟಿ: ಅಸಮಾಧಾನದಿಂದಲೇ ಹೊರ ನಡೆದ ಬಸವರಾಜ ಹೊರಟ್ಟಿ?

ಬೆಂಗಳೂರು,ಆಗಸ್ಟ್,7,2026 (www.justkannada.in): ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸೂಚನೆ ಸಂಬಂಧ ಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಇಂದು ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದರು.

ಕಳೆದ ಎರಡು ದಿನಗಳ ಹಿಂದೆ ಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ಸಭಾಪತಿ ಸ್ಥಾನಕ್ಕೆ ಬೇರೆಯವರ ಹೆಸರು ಘೋಷಿಸಿದ್ದು ಹೀಗಾಗಿ ರಾಜೀನಾಮೆ ನೀಡುವಂತೆ  ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಕರೆಮಾಡಿ ಸೂಚಿಸಿದ್ದರು.  ನಂತರ ಹೊರಟ್ಟಿ ಅವರು ಅಸಮಾಧಾನ ಹೊರ ಹಾಕಿದ್ದರು.ಸಿಎಂ ಡಿಕೆಶಿ ಭೇಟಿ basavaraj horatti

ಇದೀಗ ಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದಾರೆ. ತಮ್ಮ ಸ್ಥಾನಕ್ಕೆ ಆಗಸ್ಟ್​​ 14ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಇನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಬಸವರಾಜ ಹೊರಟ್ಟಿ ಅವರು ಅಸಮಾಧಾನದಿಂದಲೇ ಸಿಎಂ ನಿವಾಸದಿಂದ ಹೊರ  ನಡೆದರು ಎನ್ನಲಾಗಿದೆ. ಮನೆ ಬಾಗಿಲವರೆಗೂ ಸಿಎಂ ಡಿಕೆ ಶಿವಕುಮಾರ್ ಬಂದು ಬೀಳ್ಕೊಟ್ಟಿದ್ದಾರೆ.ಅಸಮಾಧಾನದಿಂದಲೇ ಹೊರ ನಡೆದ ಬಸವರಾಜ ಹೊರಟ್ಟಿ? jk02_new jk02 new

ಸಿಎಂ ಡಿಕೆ ಶಿವಕುಮಾರ್ ಭೇಟಿ ವಿಚಾರ  ಕುರಿತು ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ ಮೊನ್ನೆ ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ. ಅವರು ಅವಿಶ್ವಾಸ ನಿರ್ಣಯ ಮಂಡಿಸಿದರೆ ಮಂಡಿಸಲಿ. ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ಎಂದು ಹೇಳಿದರು.

Key words: Basavaraja Horatti, visit CM DK Shivakumar, Residence