ಧರಣಿ ನಿರತ ವಿದ್ಯಾರ್ಥಿಗಳ ಮೇಲೆ ಲಾಠೀಚಾರ್ಜ್ ಗೆ ಬಿ.ಕೆ ಹರಿಪ್ರಸಾದ್ ಖಂಡನೆ: ಕೇಂದ್ರದ ವಿರುದ್ದ ಆಕ್ರೋಶ

ಬೆಂಗಳೂರು,ಜುಲೈ,21,2026 (www.justkannada.in): ನವದೆಹಲಿಯಲ್ಲಿ  ನೀಟ್ ಅಕ್ರಮ ವಿರೋಧಿಸಿ  ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ  ಮೇಲೆ ಪೊಲೀಸರು ಲಾಠಿಚಾರ್ಜ್  ನಡೆಸಿದ ಕ್ರಮವನ್ನ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್    ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿ.ಕೆ ಹರಿಪ್ರಸಾದ್,  ಶಾಂತಿಯುತ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳ  ಮೇಲೆ ಮೋದಿ ಸರ್ಕಾರ ನಡೆಸಿರುವ ಅಮಾನವೀಯ ಪೊಲೀಸ್ ದಾಳಿ ಖಂಡನೀಯ. ಪ್ರಶ್ನೆ ಪ್ರತಿಕೆಗಳನ್ನ ರಕ್ಷಿಸಲಾಗದ ಕೇಂದ್ರ ಸರ್ಕಾರ ನ್ಯಾಯ ಕೇಳಿದ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿ ತನ್ನ ಸರ್ವಾಧಿಕಾರಿ ಕ್ರೌರ್ಯ ಪ್ರದರ್ಶಿಸಿದೆ ಎಂದು ಕಿಡಿಕಾರಿದ್ದಾರೆ.

ಪರೀಕ್ಷಾ ಪೇ ಚರ್ಚೆ ಹೆಸರಿನಲ್ಲಿ ಉಪದೇಶ ಮಾಡುವ ಪ್ರಧಾನಿಗಳಿಗೆ ವಿದ್ಯಾರ್ಥಿಗಳ ಪ್ರಶ್ನೆ ಎದುರಿಸುವ ದೈರ್ಯ 56 ಇಂಚಿನ ಎದೆಯಲ್ಲಿ ಇಲ್ಲವೇ?  ಗಾಯಗೊಂಡ ವಿದ್ಯಾರ್ಥಿಗಳಿಗೆ ತಕ್ಷಣ ಚಿಕಿತ್ಸೆ ನೀಡಿ ವಶಕ್ಕೆ ಪಡೆದವರನ್ನ ಬಿಡುಗಡೆ ಮಾಡಬೇಕು.  ಈ ದೌರ್ಜನ್ಯಕ್ಕೆ ಕೇಂದ್ರ ಸರ್ಕಾರ ದೇಶದ ಕ್ಷಮೆ ಕೇಳಬೇಕು  ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Key words: B.K. Hariprasad, condemns, lathicharge, protesting, students