Monday, September 21, 2026

BDA Apartments

ಇಂದಿರಾ ಕ್ಯಾಂಟಿನ್ ಮುಚ್ಚಿ ಎಂದು ಸಿಎಂಗೆ ಮನವಿ ಮಾಡ್ತೇನೆ- ಸಚಿವ ಸಿ.ಟಿ ರವಿ BDA...
Home Front Page ಇಂದಿರಾ ಕ್ಯಾಂಟಿನ್ ಮುಚ್ಚಿ ಎಂದು ಸಿಎಂಗೆ ಮನವಿ ಮಾಡ್ತೇನೆ- ಸಚಿವ ಸಿ.ಟಿ ರವಿ..

ಇಂದಿರಾ ಕ್ಯಾಂಟಿನ್ ಮುಚ್ಚಿ ಎಂದು ಸಿಎಂಗೆ ಮನವಿ ಮಾಡ್ತೇನೆ- ಸಚಿವ ಸಿ.ಟಿ ರವಿ..

ಬೆಂಗಳೂರು,ಡಿ,18,2019(www.justkannada.in): ಇಂದಿರಾ ಕ್ಯಾಂಟೀನ್ ಮುಚ್ಚಿ ಎಂದು ನಾನು ಸಿಎಂಗೆ ಮನವಿ ಮಾಡುತ್ತೇನೆ ಅಂತಾ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದರು.

ಈ ಬಗ್ಗೆ ಇಂದು ಮಾಧ್ಯಮದ ಜತೆ ಮಾತನಾಡಿದ ಸಚಿವ ಸಿ.ಟಿ ರವಿ, ಅಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಾ ಇದೆ. ಯಾರ ಬೀಗರಿಗೆ ಟೆಂಡರ್ ಕೊಟ್ಟಿದ್ದಾರೆ ಅಂತ ನೋಡಿ. ದುಡ್ಡು ಕೊಳ್ಳೆ ಹೊಡೆಯೋಕೆ ಬೀಗರಿಗೆ ಟೆಂಡರ್ ಕೊಟ್ಟಿದ್ದಾರೆ. ಕಾಂಗ್ರೆಸ್ ನವರು ಕೊಳ್ಳೆ ಹೊಡೆದ ದುಡ್ಡಿನಲ್ಲಿ ಊಟ ಹಾಕೋದಾದ್ರೆ ಹಾಕ್ಲಿ. ಅದು ಅವರು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿದ ಹಾಗೆ ಆಗುತ್ತೆ ಎಂದು ಕಿಡಿಕಾರಿದರು.

ಹಾಗೆಯೇ ಅವರೇ ಹಣ ಖರ್ಚು ಮಾಡೋದಾದ್ರೆ ರಾಜೀವ್ ಗಾಂಧಿ ಹೆಸರು ಇಡಲಿ. ಇಲ್ಲ ನಾನ್ ವೆಜ್ ಮಾಡಿ ಸೋನಿಯಾ ಗಾಂಧಿ ಹೆಸರು ಇಡಲಿ ನಮ್ಮ ಅಭ್ಯಂತರ ಇಲ್ಲ. ಆದ್ರೆ ಸರ್ಕಾರದ ಹಣದಲ್ಲಿ ಕ್ಯಾಂಟೀನ್ ಮುಂದುವರಿಸೋದು ಆದ್ರೆ ಅನ್ನಪೂರ್ಣೇಶ್ವರಿ ಹೆಸರು ಇಡಲಿ ಎಂದು ಸಿಎಂ ಗೆ ಮನವಿ ಮಾಡುತ್ತೇನೆ ಎಂದು ಸಚಿವ ಸಿ.ಟಿ ರವಿ ತಿಳಿಸಿದರು.

Key words:  appeals -CM – close -Indira canteen-Minister- CT Ravi.