Tuesday, September 22, 2026

BDA Apartments

ಮದ್ಯಪಾನ ಸಂಯಮ ಮಂಡಳಿಗೆ ನಟಿ ಶ್ರುತಿ ಅಧ್ಯಕ್ಷೆ BDA JK_Adv BDA Adv
Home Cinema ಮದ್ಯಪಾನ ಸಂಯಮ ಮಂಡಳಿಗೆ ನಟಿ ಶ್ರುತಿ ಅಧ್ಯಕ್ಷೆ

ಮದ್ಯಪಾನ ಸಂಯಮ ಮಂಡಳಿಗೆ ನಟಿ ಶ್ರುತಿ ಅಧ್ಯಕ್ಷೆ

ಬೆಂಗಳೂರು, ಜುಲೈ 20, 2021 (www.justkannada.in): ಚಿತ್ರನಟಿ ಹಾಗೂ ಬಿಜೆಪಿ ಸದಸ್ಯೆ ಶ್ರುತಿ ಅವರನ್ನು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಈ ಹಿಂದೆ ಅವರನ್ನು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾಗಿ ನೇಮಿಸಿ ಬಳಿಕ ಆ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.

ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ರಾಜ್ಯಪಾಲರ ಆದೇಶದ ಅನುಸಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಶ್ರುತಿ ಅವರು ಮದ್ಯಪಾನ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರೆ ಎಂದು ತಿಳಿಸಿದೆ.

ಈ ಮೂಲಕ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ಕಾರ್ಯಚರಣೆ ಆರಂಭಿಸಲಿದ್ದಾರೆ.