ಒಲಿಂಪಿಕ್ಸ್: ಟೋಕಿಯೋದಲ್ಲಿ ಅಭ್ಯಾಸ ಶುರು ಮಾಡಿದ ಭಾರತೀಯ ಅಥ್ಲಿಟ್’ಗಳು

ಬೆಂಗಳೂರು, ಜುಲೈ 20, 2021 (www.justkannada.in): ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ತೆರಳಿರುವ ಭಾರತೀಯ ಭಾರತೀಯ ಕ್ರೀಡಾಪಟುಗಳ ತಂಡ ಟೋಕಿಯೋದಲ್ಲಿ ಮೈದಾನಕ್ಕಿಳಿದು ಅಭ್ಯಾಸ ಪ್ರಾರಂಭ ಮಾಡಿದೆ.

ಆರ್ಚರ್ಗಳಾದ ದೀಪಿಕಾ ಕುಮಾರಿ ಹಾಗೂ ಅತನು ದಾಸ್, ಟೇಬಲ್ ಟೆನ್ನಿಸ್ ಆಟಗಾರರಾದ ಜಿ ಸಥಿಯನ್ ಹಾಗೂ ಎ ಶರತ್ ಕಮಾಲ್, ಶಟ್ಲರ್ಗಳಾದ ಪಿವಿ ಸಿಂಧು ಮತ್ತು ಬಿ ಸಾಯಿ ಪ್ರಣೀತ್ ಹಾಗೂ ಜಿಮ್ನ್ಯಾಸ್ಟಿಕ್ ಪಟು ಪ್ರಣತಿ ನಾಯಕ್ ತಮ್ಮ ಅಭ್ಯಾಸವನ್ನು ಆರಂಭಿಸಿದ್ದಾರೆ.

ಆರ್ಚರಿ ಜೋಡಿಗಳಾದ ಅತನು ದಾಸ್ ಹಾಗೂ ದೀಪಿಕಾ ಕುಮಾರಿ ಸೋಮವಾರ ಮುಂಜಾನೆ ಯುಮೆನೋಶಿಮಾ ಪಾರ್ಕ್ ನಲ್ಲಿ ತಮ್ಮ ಅಂತಿಮ ಹಂತದ ಅಭ್ಯಾಸವನ್ನು ಆರಂಭಿಸಿದರು. ಬ್ಯಾಡ್ಮಿಂಟನ್ನ ಸಿಂಗಲ್ಸ್ ತಂಡದ ಕೋಚ್ ಪಾರ್ಕ್ ತಯೀ ಸಾಂಗ್ ಅವರ ನೇತೃತ್ವದಲ್ಲಿ ಸಿಂಗಲ್ಸ್ ವಿಭಾಗದ ಆಟಗಾರರಾದ ಪಿವಿ ಸಿಂಧು ಹಾಗೂ ಪ್ರನೀತ್ ಅಭ್ಯಾಸವನ್ನು ನಡೆಸಿದರು.

ಮತ್ತೊಂದೆಡೆ ಡಬಲ್ಸ್ ಜೋಡಿಯಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿಗೆ ಕೋಚ್ ಮಥಿಯಾಸ್ ಬೋಯಿ ಮಾರ್ಗದರ್ಶನ ನೀಡಿದರು.