Tuesday, September 22, 2026

BDA Apartments

ಗಮನ ಸೆಳೆದ ಸೋನಿಯಾ ಗಾಂಧಿ ಕುರಿತ ನಟಿ ರಮ್ಯಾ ಟ್ವೀಟ್ BDA JK_Adv BDA Adv
Home Front Page ಗಮನ ಸೆಳೆದ ಸೋನಿಯಾ ಗಾಂಧಿ ಕುರಿತ ನಟಿ ರಮ್ಯಾ ಟ್ವೀಟ್

ಗಮನ ಸೆಳೆದ ಸೋನಿಯಾ ಗಾಂಧಿ ಕುರಿತ ನಟಿ ರಮ್ಯಾ ಟ್ವೀಟ್

ಬೆಂಗಳೂರು, ಅಕ್ಟೋಬರ್ 27, 2022 (www.justkannada.in): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪರ ಮಾಜಿ ಸಂಸದೆ, ನಟಿ ರಮ್ಯಾ ಟ್ವೀಟ್ವೊಂದನ್ನು ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ಮೊನ್ನೆಯಷ್ಟೇ ರಾಹುಲ್ ಗಾಂಧಿ ಜೊತೆ ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದ ರಮ್ಯಾ ಇದೀಗ ಮಾಡಿರುವ ಟ್ವೀಟ್ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಅಷ್ಟಕ್ಕೂ ಅವರ ಮಾಡಿರುವ ಟ್ವೀಟ್ ಇದು. “ಸೋನಿಯಾ ಗಾಂಧಿ ಅವರು ಇಟಲಿಯವರೇ ಆಗಿರಬಹುದು. ಆದರೆ ಸಾಕಷ್ಟು ಭಾರತೀಯರಿಗಿಂತ ಇವರು ನೈಜ ಭಾರತೀಯರಾಗಿದ್ದಾರೆ. ಅದು ಸತ್ಯ’’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಮಂಡ್ಯದಲ್ಲಿ ರಮ್ಯಾ ಸೋತ ನಂತರ ರಾಜಕೀಯ ಕ್ಷೇತ್ರದಿಂದ ಹೊರಗಿದ್ದರು. ಇತ್ತೀಚಿನ ತಿಂಗಳಲ್ಲಿ ಅವರು ಯಾವತ್ತೂ ರಾಜಕೀಯ ಮಾತನಾಡಲಿಲ್ಲ.ಆದರೀಗ ಮತ್ತೆ ರಾಜಕೀಯದತ್ತ ಹೆಜ್ಜೆ ಹಾಕುವ ಲಕ್ಷಣಗಳು ಕಾಣುತ್ತಿವೆ.