ವಿಪ್ಪತ್ತಿನಿಂದ ಪಾರಾಗಲು ಯುನೈಟ್ ಆರ್ ಡೈ: ಇಂಗ್ಲೆಂಡ್ ಪ್ರಧಾನಿ ರಿಷಿ ಮೊದಲ ಘೋಷಣೆ

ಬೆಂಗಳೂರು, ಅಕ್ಟೋಬರ್ 27, 2022 (www.justkannada.in): ಸಂಪುಟ ಪುನರ್‌ರಚನೆಯೊಂದಿಗೆ ತಮ್ಮ ಕಾರ್ಯಾಚರಣೆ ಆರಂಭಿಸಿರುವ  ಬ್ರಿಟನ್‌ ಪ್ರಧಾನಿ ಭಾರತ ಮೂಲದ ರಿಷಿ ಸುನಕ್, ‘ತಾನು ನೀತಿಗಳಿಗೆ ಆದ್ಯತೆ ನೀಡುತ್ತೇನೆ,ವ್ಯಕ್ತಿಗಳಿಗಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಇತರ ನಾಯಕರೊಂದಿಗೆ ಸಭೆ ನಡೆಸಿದ ಸುನಕ್,  ಕನ್ಸರ್ವೇಟಿವ್‌ಗಳು ಒಗ್ಗೂಡಬೇಕು ಅಥವಾ ಸಾಯಬೇಕು ಎಂದು ಹೇಳಿದ್ದಾರೆ.

ನಾವು ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಬಿಕ್ಕಟ್ಟು ಎರಡನ್ನೂ ಹೊಂದಿದ್ದೇವೆ. ನಾವದನ್ನು ಈಗ ಬಗೆಹರಿಸದಿದ್ದರೆ ಸಾರ್ವಜನಿಕರು ಅದಕ್ಕೆ ನಮ್ಮನ್ನು ಹೊಣೆಯಾಗಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭೆ,ಶಕ್ತಿ ಮತ್ತು ಆಲೋಚನೆಗಳನ್ನು ಹೊಂದಿದ್ದೇವೆ. ಆದರೆ ನಾವು ಒಂದೇ ಹೊಡೆತಕ್ಕೆ ಅದನ್ನು ಸಾಧಿಸಬೇಕಿದೆ,ಎರಡನೇ ಅವಕಾಶ ನಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.