Sunday, November 8, 2026

Dasara Wishes

Happy Dasara
Home Front Page ಟಿ-20 ಕ್ರಿಕೆಟ್: ನಾಳೆಯ ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ

ಟಿ-20 ಕ್ರಿಕೆಟ್: ನಾಳೆಯ ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ

ಬೆಂಗಳೂರು, ಅಕ್ಟೋಬರ್ 27, 2022 (www.justkannada.in): ಭಾರತ ತಂಡವು ಗುರುವಾರ ನಡೆಯಲಿರುವ ನೆದರ್ಲೆಂಡ್ಸ್‌ ವಿರುದ್ಧ ಪಂದ್ಯದಲ್ಲಿ ಪ್ರಯೋಗಕ್ಕೆ ಸಿದ್ಧವಾಗಿದೆ.

ಪಾಕಿಸ್ತಾನ ತಂಡದ ಎದುರು ರೋಚಕ ಜಯ ಕಂಡ ಟೀಂ ಇಂಡಿಯಾದ ವಿಶ್ವಾಸ ದುಪ್ಪಟ್ಟಾಗಿದೆ. ಇದೇ ಜೋಶ್ ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಕೆಲ ಪ್ರಯೋಗ ನಡೆಸಲು ತಯಾರಿ ನಡೆಸಲಾಗಿದೆ.

ನಾಳೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ರೋಹಿತ್ ಶರ್ಮಾ ಬಳಗವು ಕಣಕ್ಕಿಳಿಯಲಿದೆ. ಇಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಿ ದೀಪಕ್ ಹೂಡಾಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಅನುಭವದ ಕೊರತೆಯಿರುವ ನೆದರ್ಲೆಂಡ್ಸ್‌ ವಿರುದ್ಧ ಸುಲಭ ಜಯದ ನಿರೀಕ್ಷೆಯಲ್ಲಿರುವ ಭಾರತ ತಂಡವು ಬೆಂಚ್‌ ಶಕ್ತಿಯ ಸಾಮರ್ಥ್ಯ ಪರೀಕ್ಷೆ ಮಾಡಲು ಯೋಚಿಸಿದೆ.