Tuesday, September 22, 2026

BDA Apartments

ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನ ಪಡೆದ ನಟರು, ಅಭಿಮಾ...
Home Cinema ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನ ಪಡೆದ ನಟರು, ಅಭಿಮಾನಿಗಳು

ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನ ಪಡೆದ ನಟರು, ಅಭಿಮಾನಿಗಳು

ಬೆಂಗಳೂರು, ಜೂನ್ 15, 2021 (www.justkannada.in): ವಿಜಯ್​ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇಡಲಾಗಿದ್ದು, ನೂರಾರು ಮಂದಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ನಟ ಶಿವರಾಜ್​ ಕುಮಾರ್ ಸೇರಿದಂತೆ ನಟ, ನಟಿಯರಿ​ ಸಹ ಅಂತಿಮ ನಮನ ಸಲ್ಲಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದರು.

ನಿರ್ದೇಶಕ ಲಿಂಗದೇವರು, ಸತೀಶ್​ ನೀನಾಸಂ, ನಿರ್ದೇಶಕ ಮನ್ಸೋರೆ, ನಟ ಧನಂಜಯ್​ ಸೇರಿದಂತೆ ಸಿನಿರಂಗದ ಸಾಕಷ್ಟು ಮಂದಿ ರವೀಂದ್ರ ಕಲಾಕ್ಷೇತ್ರಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ಇನ್ನೇನು ಕೆಲವೇ ನಿಮಿಷಗಳಲ್ಲಿ ವಿಜಯ್​ ಅವರ ಪಾರ್ಥೀವ ಶರೀರವನ್ನು ಅವರ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುವುದು. ಇಂದು ಸಂಜೆ ವಿಧಿ ವಿಧಾನಗಳ ಪ್ರಕಾರ ಅವರ ಅಂತ್ಯಸಂಸ್ಕಾರ ಅವರ ಸ್ನೇಹಿತನ ಹೊಲದಲ್ಲೇ ನಡೆಯಲಿದೆ.