Saturday, August 15, 2026

BDA Apartments

Home Front Page ಜೂನ್ 21 ರಿಂದ ಮಾರುಕಟ್ಟೆಗಳು, ಜ್ಯೂವೆಲ್ಲರಿ ಶಾಪ್ ಸೇರಿ  ವಾಣಿಜ್ಯ ಮಳಿಗೆಗಳನ್ನ ತೆರೆಯಲು ಅವಕಾಶ..?

ಜೂನ್ 21 ರಿಂದ ಮಾರುಕಟ್ಟೆಗಳು, ಜ್ಯೂವೆಲ್ಲರಿ ಶಾಪ್ ಸೇರಿ  ವಾಣಿಜ್ಯ ಮಳಿಗೆಗಳನ್ನ ತೆರೆಯಲು ಅವಕಾಶ..?

ಬೆಂಗಳೂರು,ಜೂನ್,15,2021(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಅನ್ನ ತೆರವು ಗೊಳಿಸಲಾಗುತ್ತಿದೆ. ಮೊದಲ ಹಂತವಾಗಿ ಈಗಾಗಲೇ 19 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗಿದೆ.jk

ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್ ಡೌನ್ ಮುಂದುವರೆದಿದ್ದು ಆ ನಂತರ ಅನ್ ಲಾಕ್ 2.0 ಪ್ರಾರಂಭವಾಗಲಿದೆ. ಈ ವೇಳೆಯಲ್ಲಿ ಹೋಟೆಲ್ ಕಿರುಮಾರುಕಟ್ಟೆಗಳು, ಬಟ್ಟೆ ಅಂಗಡಿಗಳು ಚಿನ್ನದ ಅಂಗಡಿಗಳು, ಸೇರಿ ವಾಣಿಜ್ಯ ಮಳಿಗೆಗಳನ್ನ ತೆರೆಯಲು ಅವಕಾಶ ನೀಡಲು ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

ದಿನದ 8 ಗಂಟೆಯೂ ವ್ಯಾಪಾರಕ್ಕೆ ಅವಕಾಶವಿರುತ್ತದೆ. ಇನ್ನು ಮದುವೆಗಳಲ್ಲಿ 50 ಮಂದಿಗೆ ಮಾತ್ರ ಅವಕಾಶ, ಹಾಗೂ ಶೇ.,50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರ ಆರಂಭಿಸುವ ಸಾಧ್ಯತೆ ಇದೆ.

Key words: corona-unlock- June 21-  markets- Jewelry Shop- open