ವೈದ್ಯಕೀಯ ಪರೀಕ್ಷೆಗೆ ಅಮೆರಿಕಾಗೆ ಸೂಪರ್ ಸ್ಟಾರ್ ರಜನಿ

ಬೆಂಗಳೂರು, ಜೂನ್ 15, 2021 (www.justkannada.in): ಸೂಪರ್ ಸ್ಟಾರ್ ರಜನಿಕಾಂತ್ ವೈದ್ಯಕೀಯ ಪರೀಕ್ಷೆಗೆ ಅಮೆರಿಕಾಗೆ ತೆರಳಲಿದ್ದಾರೆ. ಪ್ರಯಾಣಕ್ಕೆ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಬಳಿ ವಿಶೇಷ ವಿಮಾನದಲ್ಲಿ ತೆರಳಲು ಅವಕಾಶ ಕೋರಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ,  ಕೊರೊನಾ ನಡುವೆ ವಿದೇಶ ಪ್ರಯಾಣ ನಡೆಸಲು ಅವಕಾಶ ಕೇಳಿದ್ದಾರೆ.

ಜೂನ್ 20 ರಂದು ರಜನಿಕಾಂತ್ ವಿಶೇಷ ವಿಮಾನದಲ್ಲಿ ಅಮೆರಿಕಾಗೆ ತೆರಳಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಜನಿಕಾಂತ್ ಕೊರೊನಾ ಕಾರಣದಿಂದ ಅಮೆರಿಕಾಗೆ ತೆರಳಿರಲಿಲ್ಲ.

ವಿಶೇಷ ವಿಮಾನದಲ್ಲಿ 14 ಮಂದಿ ಪ್ರಯಾಣಿಸುವ ಅವಕಾಶ ಇರಲಿದೆ. ವಿಮಾನದಲ್ಲಿ ರಜನಿಕಾಂತ್ ಜೊತೆ, ಕೆಲ ಕುಟುಂಬದ ಸದಸ್ಯರು ಕೂಡ ವಿದೇಶಕ್ಕೆ ಪ್ರಯಾಣಿಸಲಿದ್ದಾರೆ.