ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನ ಪಡೆದ ನಟರು, ಅಭಿಮಾನಿಗಳು

ಬೆಂಗಳೂರು, ಜೂನ್ 15, 2021 (www.justkannada.in): ವಿಜಯ್​ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇಡಲಾಗಿದ್ದು, ನೂರಾರು ಮಂದಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ನಟ ಶಿವರಾಜ್​ ಕುಮಾರ್ ಸೇರಿದಂತೆ ನಟ, ನಟಿಯರಿ​ ಸಹ ಅಂತಿಮ ನಮನ ಸಲ್ಲಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದರು.

ನಿರ್ದೇಶಕ ಲಿಂಗದೇವರು, ಸತೀಶ್​ ನೀನಾಸಂ, ನಿರ್ದೇಶಕ ಮನ್ಸೋರೆ, ನಟ ಧನಂಜಯ್​ ಸೇರಿದಂತೆ ಸಿನಿರಂಗದ ಸಾಕಷ್ಟು ಮಂದಿ ರವೀಂದ್ರ ಕಲಾಕ್ಷೇತ್ರಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ಇನ್ನೇನು ಕೆಲವೇ ನಿಮಿಷಗಳಲ್ಲಿ ವಿಜಯ್​ ಅವರ ಪಾರ್ಥೀವ ಶರೀರವನ್ನು ಅವರ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುವುದು. ಇಂದು ಸಂಜೆ ವಿಧಿ ವಿಧಾನಗಳ ಪ್ರಕಾರ ಅವರ ಅಂತ್ಯಸಂಸ್ಕಾರ ಅವರ ಸ್ನೇಹಿತನ ಹೊಲದಲ್ಲೇ ನಡೆಯಲಿದೆ.