Tuesday, September 22, 2026

BDA Apartments

ನಟ ಶಿವರಾಜ್ ಕುಮಾರ್ ಅವರ ಶಬರಿಮಲೆ ಯಾತ್ರೆ ರದ್ಧು… BDA JK_Adv BDA Adv
Home Cinema ನಟ ಶಿವರಾಜ್ ಕುಮಾರ್ ಅವರ ಶಬರಿಮಲೆ ಯಾತ್ರೆ ರದ್ಧು….

ನಟ ಶಿವರಾಜ್ ಕುಮಾರ್ ಅವರ ಶಬರಿಮಲೆ ಯಾತ್ರೆ ರದ್ಧು….

ಬೆಂಗಳೂರು,ಮಾ,14,2020(www.justkannada.in):  ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹಮ್ಮಿಕೊಂಡಿದ್ದ ಶಬರಿಮಲೆ ಯಾತ್ರೆಯನ್ನ ರದ್ದು ಮಾಡಿದ್ದಾರೆ.

ದೇಶಾದ್ಯಂತ ಕೊರೋನಾ ಸೋಂಕಿನ ಭೀತಿ ಎದುರಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಟ ಶಿವರಾಜ್ ಕುಮಾರ್ ಶಬರಿಮಲೆಯಾತ್ರೆ ರದ್ದು ಮಾಡಿದ್ದಾರೆ ಎನ್ನಲಾಗಿದೆ. ನಟ ಶಿವರಾಜ್ ಕುಮಾರ್ ಫೆಬ್ರವರಿ 11 ರಂದು ಮಾಲೆ ಧರಿಸಿದ್ದರು. ನಾಳೆ ಸಂಜೆ ವೇಳೆಗೆ ಶಬರಿಮಲೆಗೆ ತಲುಪಬೇಕಾಗಿತ್ತು.

ಮಾರ್ಚ್ 18 ರಂದು ವಾಪಸ್ ಬರಲು ಶಿವರಾಜ್ ಕುಮಾರ್ ತೀರ್ಮಾನಿಸಿದ್ದರು.  ಆದರೆ ದೇವಸ್ಥಾನದಲ್ಲಿ ಪೂಜೆ ನಡೆಯುವುದು ಅನುಮಾನ ಹಿನ್ನೆಲೆ ಶಬರಿಮಲೆ ಯಾತ್ರೆಯನ್ನ ರದ್ಧು ಮಾಡಿದ್ದಾರೆ ಎನ್ನಲಾಗಿದೆ.

Key words: Actor- Shivraj Kumar- Sabarimala Yatra -canceled.