ಸರ್ಕಾರ ಆದೇಶವಿದ್ರೂ ಓಪನ್ : ಡೆಕತ್ ಲಾನ್ ಸ್ಪೋರ್ಟ್ಸ್ ಮಾಲ್ ಬಂದ್ ಮಾಡಿಸಿದ ಕನ್ನಡಪರ ಹೋರಾಟಗಾರರು….

ಮೈಸೂರು,ಮಾ,14,2020(www.justkannada.in): ಕೊರೋನಾ ವೈರಸ್ ಭೀತಿ  ಹಿನ್ನೆಲೆ ರಾಜ್ಯಾದ್ಯಂತ ಒಂದು ವಾರಗಳ ಕಾಲ ಥಿಯೇಟರ್, ಮಾಲ್ ಗಳನ್ನ ಬಂದ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಸರ್ಕಾರದ ಆದೇವಿದ್ದರೂ ಓಪನ್ ಆಗಿದ್ದ ಡೆಕತ್ ಲಾನ್ ಸ್ಪೋರ್ಟ್ಸ್ ಮಾಲ್ ಅನ್ನ ಕನ್ನಡ ಪರ ಹೋರಾಟಗಾರರು ಮುಚ್ಚಿಸಿದರು.

ಡಕತ್ ಲಾನ್ ಸ್ಪೋರ್ಟ್ಸ್ ಮಾಲ್  ಗೆ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿಗರು ಭೇಟಿ ನೀಡುತ್ತಾರೆ. ಈ ನಡುವೆ ಮಹಾಮಾರಿ ಕೋರೋನಾ ವೈಸರ್ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಸ್ಪಷ್ಟ ಆದೇಶ ನೀಡಿದ್ರು ಆದೇಶ ಪ್ರತಿ ನಮ್ಮ ಕೈಗೆ ತಲುಪಿಲ್ಲ ಎಂದು ಮಾಲ್ ತೆರೆದಿದ್ದರು. ಸರ್ಕಾದ ಆದೇಶ ನಮಗೆ ತಲುಪಿಲ್ಲವೆಂದು ಸ್ಪೋರ್ಟ್ಸ್ ಮಾಲ್ ಓಪನ್ ಮಾಡಲಾಗಿತ್ತು.open- Decathlon Lawn Mall- Bandh-kannada activitist

ಈ ವೇಳೆ ಹೃದಯವಂತ ಕನ್ನಡ ಸಂಘದ ಸದಸ್ಯರು ಸ್ಥಳಕ್ಕೆ ತೆರಳಿ ಮಾಲ್ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರೇ ಆದ್ರು ಸಮಾಜದ ಹಿತದೃಷ್ಟಿಯಿಂದ ಸರ್ಕಾರದ ಆದೇಶ ಪಾಲಿಸಬೇಕು  ಎಂದು ಕನ್ನಡಪರ ಕಾರ್ಯಕರ್ತರು ಕಿವಿಮಾತು ಹೇಳಿದರು.

Key words: open- Decathlon Lawn Mall- Bandh-kannada activitist