ಮೈಸೂರು,ಸೆಪ್ಟಂಬರ್,23,2026 (www̤.justkannada.in): ವಿದ್ಯುತ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಲೈನ್‌ಮೆನ್‌ಗೆ ವಿದ್ಯುತ್ ಶಾಕ್ ತಗುಲಿ ಗಂಭೀರ ಗಾಯಗೊಂಡಿರುವ ಘಟನೆ ನಗರದ ಚಾಮುಂಡಿಪುರಂನಲ್ಲಿ ನಡೆದಿದೆ.
ಚಾಮುಂಡಿಪುರಂ ಉಪವಿಭಾಗದಲ್ಲಿ ವಿದ್ಯುತ್ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಕೆ.ಆರ್.ನಗರ ಮೂಲದ ಲೈನ್ ಮೆನ್ ಕಾರ್ತಿಕ್ ಅವರಿಗೆ ವಿದ್ಯುತ್ ಶಾಕ್ ತಗುಲಿದೆ. ಪರಿಣಾಮ ಅವರ ಎಡ ಮುಂಗೈ ತುಂಡಾಗಿ ಬಿದ್ದಿದ್ದು, ಹೊಟ್ಟೆ ಭಾಗಕ್ಕೂ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಅವಘಡದ ಬಳಿಕ ಕಾರ್ತಿಕ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Key words: Accident, electrical repair, Mysuru, Lineman, serious injuries.






