Wednesday, July 29, 2026

BDA Apartments

Home Front Page ಮನೆ ಮನೆ ಕಸ ಸಂಗ್ರಹಿಸಿ ಆ್ಯಶಸ್ ಟೆಸ್ಟ್‌ ನೋಡಿದ ಬಾಲಕ

ಮನೆ ಮನೆ ಕಸ ಸಂಗ್ರಹಿಸಿ ಆ್ಯಶಸ್ ಟೆಸ್ಟ್‌ ನೋಡಿದ ಬಾಲಕ

ಲಂಡನ್, ಸೆಪ್ಟೆಂಬರ್ 07, 2019 (www.justkannada.in): ಆಸ್ಟ್ರೇಲಿಯದ ಮ್ಯಾಕ್ಸ್‌ ವೈಟ್‌ ಎಂಬ 12ರ ಹರೆಯದ ಬಾಲಕ ಆ್ಯಶಸ್ ಟೆಸ್ಟ್‌ ಪಂದ್ಯವನ್ನು ಸ್ಟೇಡಿಯಂನಲ್ಲಿ ಕುಳಿತು ನೋಡುವ ಸಲುವಾಗಿ 4 ವರ್ಷಗಳಿಂದ ಮನೆಮನೆಯ ತ್ಯಾಜ್ಯ ವಿಲೇವಾರಿ ಮಾಡಿ ಹಣ ಸಂಗ್ರಹಿಸುತ್ತಿದ್ದ!

2015ರ ವಿಶ್ವಕಪ್‌ ಫೈನಲ್‌ನಲ್ಲಿ ಮೆಲ್ಬರ್ನ್ ಮೈದಾನದಲ್ಲಿ ನ್ಯೂಜಿಲ್ಯಾಂಡನ್ನು ಸೋಲಿಸಿ ಆಸ್ಟ್ರೇಲಿಯ ಕಪ್‌ ಎತ್ತಿದ ಪಂದ್ಯವನ್ನು ಮ್ಯಾಕ್ಸ್‌ ನೋಡಿದ್ದ.

ಆದರೆ ಆಯಶಸ್‌ ಸರಣಿಯಲ್ಲಿ ತನ್ನ ದೇಶ ಆಡುವುದನ್ನು ನೋಡಬೇಕೆನ್ನುವುದು ಮ್ಯಾಕ್ಸ್‌ ಮತ್ತು ಅವನ ತಾಯಿಯ ಆಸೆಯಾಗಿತ್ತು. ಇದಕ್ಕೆ 1,500 ಆಸ್ಟ್ರೇಲಿಯ ಡಾಲರ್‌ ಬೇಕೆಂದು ಮ್ಯಾಕ್ಸ್‌ಗೆ ಅವನ ತಂದೆ ಡ್ಯಾಮಿನ್‌ ವೈಟ್‌ ಹೇಳಿದ್ದರು.

ಇಷ್ಟು ಹಣ ಒಟ್ಟು ಮಾಡುವ ಸಲುವಾಗಿ ಮ್ಯಾಕ್ಸ್‌ ಮತ್ತು ತಾಯಿ ಮನೆಯಿಂದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಕಾಯಕ ಶುರು ಮಾಡಿದರು. ಈ ಮೂಲಕ 4 ವರ್ಷದಲ್ಲಿ ಮ್ಯಾಕ್ಸ್‌ ಮಾತ್ರವಲ್ಲದೆ ಅವನ ಇಡೀ ಕುಟುಂಬ ಇಂಗ್ಲೆಂಡಿಗೆ ಪ್ರಯಾಣಿಸಲು ಸಾಕಾಗುವಷ್ಟು ಹಣ ಸಂಗ್ರಹವಾಗಿತ್ತು.