ಯುಎಸ್‌ ಓಪನ್‌: ಪ್ರಶಸ್ತಿಗಾಗಿ ಇಂದು ಸೆರೆನಾ- ಕೆನಡಾದ ಬಿಯಾಂಕಾ ಆಯಂಡ್ರಿಸ್ಕಾ ಸೆಣೆಸಾಟ

ನ್ಯೂಯಾರ್ಕ್‌, ಸೆಪ್ಟೆಂಬರ್ 07, 2019 (www.justkannada.in): 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸ್‌ ಸತತ 2ನೇ ಯುಎಸ್‌ ಓಪನ್‌ ಫೈನಲ್‌ ಪ್ರವೇಶಿಸಿದ್ದಾರೆ.

ಇದೇ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ತಲುಪಿರುವ ಕೆನಡಾದ ಬಿಯಾಂಕಾ ಆಯಂಡ್ರಿಸ್ಕಾ ಅವರನ್ನು ಎದುರಿಸಲಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ಶನಿವಾರ ನಡುರಾತ್ರಿ ಬಳಿಕ 1.30ಕ್ಕೆ ಆರಂಭವಾಗಲಿದೆ.

19ರ ಹರೆಯದ ಬಿಯಾಂಕಾ ಆಯಂಡ್ರಿಸ್ಕಾ ಗ್ರ್ಯಾನ್‌ಸ್ಲಾಮ್‌ ಫೈನಲ್‌ ತಲುಪಿದ ಕೆನಡಾದ ಕೇವಲ 2ನೇ ಆಟಗಾರ್ತಿಯಾದರೆ, ಯುಎಸ್‌ ಓಪನ್‌ ಪ್ರಶಸ್ತಿ ಸುತ್ತಿಗೆ ನೆಗೆದ ಕೆನಡಾದ ಮೊದಲ ಸಾಧಕಿ.