Wednesday, August 5, 2026

BDA Apartments

Home Front Page ನಿಜವಾದ ರತ್ನನಿಗೆ ಕರ್ನಾಟಕ ರತ್ನ ನೀಡುತ್ತಿದ್ದೇವೆ- ಸಿಎಂ ಬೊಮ್ಮಾಯಿ.

ನಿಜವಾದ ರತ್ನನಿಗೆ ಕರ್ನಾಟಕ ರತ್ನ ನೀಡುತ್ತಿದ್ದೇವೆ- ಸಿಎಂ ಬೊಮ್ಮಾಯಿ.

ಬೆಂಗಳೂರು,ನವೆಂಬರ್,1,2022(www.justkannada.in):  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆರಂಭಗೊಳ್ಳಲಿದೆ.

ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಅವರಿಗೆ  ಪ್ರಶಸ್ತಿ ನೀಡುತ್ತಿರುವುದು ನಮ್ಮ ಹೆಮ್ಮೆ.  ನಿಜವಾದ ರತ್ನನಿಗೆ ಕರ್ನಾಟಕ ರತ್ನ ನೀಡಲಾಗುತ್ತಿದೆ. ಇದು ದೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುವ ಕನ್ನಡ ರಾಜ್ಯೋತ್ಸವ.

ಪುನೀತ್ ರಾಜ್ ಕುಮಾರ್ ಇನ್ನಷ್ಟು ದಿನ ನಮ್ಮೊಂದಿಗೆ ಇರಬೇಕಿತ್ತು.ಆದರೂ  ಪುನೀತ್ ನಮ್ಮೊಂದಿಗಿದ್ದಾರೆ ಎಂದುಕೊಂಡಿದ್ದೇವೆ.  ಇಂದು ಇಡೀ ಕರ್ನಾಟಕ ಸಂಭ್ರಮಿಸುತ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Karnataka Ratna – real Ratna-punith rajkumar- CM Bommai.