Saturday, November 7, 2026

Dasara Wishes

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಒಲಿದ ಕೆಪಿಸಿಸಿ ಅಧ್ಯಕ್ಷ ಪಟ್ಟ… DasraWishes_JK DasraWishes JK
Happy Dasara
Home Crime ಬೈಕ್ ಅಪಘಾತ: ಫ್ಲೈ ಓವರ್ ನಿಂದ ಕೆಳಗೆ ಬಿದ್ದು ಇಬ್ಬರು ದುರ್ಮರಣ.

ಬೈಕ್ ಅಪಘಾತ: ಫ್ಲೈ ಓವರ್ ನಿಂದ ಕೆಳಗೆ ಬಿದ್ದು ಇಬ್ಬರು ದುರ್ಮರಣ.

ಬೆಂಗಳೂರು,ಅಕ್ಟೋಬರ್,29,2022(www.justkannada.in):   ಬೈಕ್ ಅಪಘಾತದಿಂದ ಇಬ್ಬರು  ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಪ್ಲೈ ಓವರ್​ ನಲ್ಲಿ ನಡೆದಿದೆ.

ಎಲಿವೇಟೆಡ್​ ರಸ್ತೆ ಫ್ಲೈಓರ್​ನಿಂದ ಕೆಳಗೆ ಬಿದ್ದು ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ  ಎಂಬ ಮಾಹಿತಿ ಲಭ್ಯವಾಗಿದೆ. ಉತ್ತರ ಭಾರತ ಮೂಲದ ವಿಕ್ರಮ್(28), ಅಮಿತ್ ಸಿಂಗ್(27) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇನ್ನೊಬ್ಬ ವ್ಯಕ್ತಿ ಸೌರಭ್(27) ಸ್ಥಿತಿ ಗಂಭೀರವಾಗಿದ್ದು, ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇವರು ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನಲ್ಲಿ ನೆಲೆಸಿದ್ದರು ಎಂದು ಹೇಳಲಾಗಿದೆ. ಫ್ಲೈಓವರ್​ ತಡೆಗೋಡೆಗೆ ಬೈಕ್ ಸವಾರರು ಡಿಕ್ಕಿ ಹೊಡೆದು ಇಬ್ಬರು ಬೈಕ್  ಪ್ಲೈ ಓವರ್​ನಿಂದ ಕೆಳಗೆ ಬಿದ್ದು  ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಈ ಇಬ್ಬರ ಮೃತದೇಹವನ್ನು ಸ್ಥಳಾಂತರ ಮಾಡಲಾಗಿದೆ.  ಈ ಕುರಿತು ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Bike- accident:-Two death- flyover.