ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಹಣ ಆರೋಪ:  ಇದು ‘ಪೇ ಸಿಎಂ’ ರೀತಿ ‘ಪೇ ಪಿಎಂ ‘ಆಗಿದೆ ಎಂದು ಎಂ.ಬಿ ಪಾಟೀಲ್ ವ್ಯಂಗ್ಯ.

ಬೆಂಗಳೂರು,ಅಕ್ಟೋಬರ್,29,2022(www.justkannada.in):  ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಹಣ ಹೋಗಿದೆ ಎಂಬ ಆರೋಪ ಕೇಳಿ ಬಂದಿರುವ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಇದು ‘ಪೇ ಸಿಎಂ’ ರೀತಿ ‘ಪೇ ಪಿಎಂ ‘ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಚಿವ ಎಂ.ಬಿ ಪಾಟೀಲ್,  ಇದೊಂದು ಕೆಟ್ಟ ಸಂಪ್ರದಾಯ. ದೀಪಾವಳಿ ಹಬ್ಬಕ್ಕೆ ಸ್ವೀಟ್ ಬಾಕ್ಸ್ ಕೊಡಬೇಕು.  ಅದರೆ ಸ್ವೀಟ್ ಬಾಕ್ಸ್ ನಲ್ಲಿ ಹಣವಿಟ್ಟು ಕೊಡುವುದು ಸರಿಯಲ್ಲ. ಸಿಎಂ ಬೊಮ್ಮಾಯಿ ಗಮನಕ್ಕೆ ತರದೆ ಹೇಗೆ ನಡೆಯುತ್ತೆ. ಅಷ್ಟೊಂದು ದುಡ್ಡು ಎಲ್ಲಿಂದ ಬಂದಿದೆ. ಯಾರ ದುಡ್ಡು ಅದು..?  ಇದು ಪೇ ಸಿಎಂ ರೀತಿ ಪೇ ಪಿಎಂ ಆಗಿದೆ. ಅಂದರೇ ಪೇ ಫಾರ್ ಪ್ರೆಸ್ ಅಂಡ್ ಮೀಡಿಯಾ ಆಗಿದೆ ಎಂದು ಕಿಡಿಕಾರಿದರು.

Key words: Allegation – money – CM’s office – journalists-MB Patil