Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Cinema ಡಾಲಿಯ ‘ಹೆಡ್ ಬುಷ್’ಗೆ ಫುಲ್ ಡಿಮ್ಯಾಂಡ್: ಪ್ರೀಬುಕ್ಕಿಂಗ್ ಜೋರು !

ಡಾಲಿಯ ‘ಹೆಡ್ ಬುಷ್’ಗೆ ಫುಲ್ ಡಿಮ್ಯಾಂಡ್: ಪ್ರೀಬುಕ್ಕಿಂಗ್ ಜೋರು !

ಬೆಂಗಳೂರು, ಅಕ್ಟೋಬರ್ 20, 2022 (www.justkannada.in): ಅಗ್ನಿ ಶ್ರೀಧರ್ ಅವರ ಚಿತ್ರಕತೆ ಇರುವ ಹೆಡ್ ಬುಷ್ ಚಿತ್ರ  ಅಕ್ಟೋಬರ್ 21ರಂದು) ರಾಜ್ಯಾದ್ಯಂತ ತೆರೆಕಾಣಲಿದೆ.

ಚಿತ್ರಕ್ಕೆ ಶೂನ್ಯ ಆಕ್ಷನ್ ಕಟ್ ಹೇಳಿದ್ದು, ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ ರೌಡಿಗಳಾಗಿ ಚಿತ್ರಮಂದಿರಕ್ಕೆ ಕಾಲಿಡಲಿದ್ದಾರೆ.

ಬೆಂಗಳೂರಿನ ಅಂಡರ್‌ವರ್ಲ್ಡ್ ಕುರಿತ ಚಿತ್ರ ಇದಾಗಿದ್ದು, ಜಯರಾಜ್ ಕಾಲದ ರಕ್ತಸಿಕ್ತ ಕತೆಗಳನ್ನು ತೆರೆ ಮೇಲೆ ಕಾಣಬಹುದಾಗಿದೆ.

ಚಿತ್ರದ ಶುಕ್ರವಾರ ಬಿಡುಗಡೆಯಾಗಲಿದ್ದರೆ, ಇದಕ್ಕೂ ಒಂದು ದಿನ ಮುಂಚೆ ಅಂದರೆ ನಾಳೆ ಅಕ್ಟೋಬರ್ 20ರಂದು ಗುರುವಾರ ಸಂಜೆ ಮತ್ತು ರಾತ್ರಿ ಹೆಡ್ ಬುಷ್ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಚಿತ್ರತಂಡ ಆಯೋಜಿಸುತ್ತಿದೆ.

ಮೈಸೂರಿನ ಡಿಆರ್‌ಸಿ ಹಾಗೂ ವಿಷನ್ ಸಿನಿಮಾಸ್‌ನಲ್ಲಿ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳ ಮುಂಗಡ ಬುಕಿಂಗ್ ಆರಂಭಗೊಂಡಿದೆ.

ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಗುರುವಾರ ಸಂಜೆ 7.05 ಹಾಗೂ ರಾತ್ರಿ 10 ಗಂಟೆಗೆ ಎರಡು ಶೋಗಳನ್ನು ಆಯೋಜಿಸಲಾಗಿದೆ.