Tuesday, September 22, 2026

BDA Apartments

ಮತ್ತೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಜನರು ಕೇಳುತ್ತಿದ್ಧಾರೆ-ಮಾಜಿ...
Home Front Page ಮತ್ತೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಜನರು ಕೇಳುತ್ತಿದ್ಧಾರೆ-ಮಾಜಿ ಸಿಎಂ ಸಿದ್ಧರಾಮಯ್ಯ.

ಮತ್ತೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಜನರು ಕೇಳುತ್ತಿದ್ಧಾರೆ-ಮಾಜಿ ಸಿಎಂ ಸಿದ್ಧರಾಮಯ್ಯ.

ಮೈಸೂರು,ಸೆಪ್ಟಂಬರ್,26,2022(www.justkannada.in):  ಮತ್ತೆ ವರುಣಾ ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ಅಲ್ಲಿನ ಜನರು ಕೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ನುಡಿದರು.

ವರುಣಾ ಕ್ಷೇತ್ರದಲ್ಲಿ ಇಂದು ರೌಂಡ್ಸ್ ಹಾಕಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ನಂಜನಗೂಡು ತಾಲ್ಲೂಕು ಚಿಕ್ಕಹೊಮ್ಮಗ್ರಾಮದ ಕೆರೆಗೆ ಬಾಗೀನ ಅರ್ಪಿಸಿದರು.  ಈ ವೇಳೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ಉಪಸ್ಥಿತರಿದ್ದರು.

ಬಾಗೀನ ಅರ್ಪಿಸಿ ಮಾತನಾಡಿದ ಸಿದ್ಧರಾಮಯ್ಯ, ಮತ್ತೆ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕೇಳುತ್ತಿದ್ದಾರೆ. ಇತ್ತ ಬಾದಮಿ ಕ್ಷೇತ್ರದ ಜನ ಅಲ್ಲಿಂದಲೇ ಸ್ಪರ್ಧಿಸುವಂತೆ ಕೇಳುತ್ತಿದ್ದಾರೆ. ಕೋಲಾರ ಚಾಮರಾಜಪೇಟೆ ಕ್ಷೇತ್ರದವರು ಸ್ಪರ್ಧೆಗೆ ಒತ್ತಾಯ ಮಾಡುತಿದ್ದಾರೆ. ನನ್ನನ್ನ ಸಿಎಂ ಮಾಡಿದ್ದವರು ವರುಣಾ ಕ್ಷೇತ್ರದ ಜನರು.  ಈ ವಿಚಾರವನ್ನ ಎಷ್ಟು ಸಲ ಬೇಕಾದರೂ ಹೇಳುತ್ತೇನೆ ಎಂದರು.

ಏನಾದ್ರೂ ಕೆಲಸವಾಗಬೇಕು ಅಂದರೇ ಸರ್ಕಾರಕ್ಕೆ 40 ಪರ್ಸೆಂಟ್ ಕಮಿಷನ್ ಕೊಡಬೇಕು. ನಮ್ಮ ಶಾಸಕರನ್ನ ಖರೀದಿಸಿ ಬಿಎಸ್ ಯಡಿಯೂರಪ್ಪ ಸಿಎಂ ಆದ್ರು. ಆದರೆ ಇದೀಗ  ಬಿಎಸ್ ವೈ ಅವರನ್ನೇ ತೆಗೆದು ಹಾಕಿದ್ದಾರೆ.  ಈಗ ಇವರು ಕೆಲಸ ಮಾಡುತ್ತಿಲ್ಲ . ಲೂಟಿ ಮಾಡಿಕೊಂಡು ಜನರಿಗೆ ಟೋಪಿ ಹಾಕುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: contest -again – Varuna constituency-Former CM- Siddaramaiah