ಉದ್ಘಾಟನೆ ಬೆನ್ನಲ್ಲೇ ಮಂಕಾದ ಮೈಸೂರು ದಸರಾ: ಯುವ ದಸರಾ ದಿಢೀರ್ ಮುಂದೂಡಿಕೆ..

ಮೈಸೂರು,ಸೆಪ್ಟಂಬರ್,26,2022(www.justkannada.in): ಕೋವಿಡ್ ಮಹಾಮಾರಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಗಿದ್ದ  ವಿಶ್ವ ವಿಖ್ಯಾತ ಮೈಸೂರು ದಸರಾವನ್ನ ಈ ಬಾರಿ ಸರ್ಕಾರ ಅದ್ಧೂರಿಯಾಗಿ ಆಚರಿಸುತ್ತಿರುವುದಾಗಿ ಹೇಳಿದ್ದು ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆಯನ್ನೂ ನೀಡಿದ್ಧಾರೆ.

ಈ ನಡುವೆ ಉದ್ಘಾಟನೆಯಾದ ಬೆನ್ನಲ್ಲೇ ಮೈಸೂರು ದಸರಾ ಮಂಕಾದಂತೆ ಕಾಣುತ್ತಿದ್ದು, ಅದ್ವಾನ, ಅವ್ಯವಸ್ಥೆಗಳ ಬೀಡಾಗಿದೆ.  ದಸರಾ ಉದ್ಘಾಟನೆಯಾದ ಬೆನ್ನಲ್ಲೇ ರಾಷ್ಟ್ರಪತಿ ಜೊತೆ ಮಂತ್ರಿ ಮಹೋದಯರು ಸಹ ಮೈಸೂರು ಬಿಟ್ಟು ತೆರಳಿದ್ದಾರೆ.

ಚಿತ್ರ ನಟರನ್ನ ಕರೆತರುವಲ್ಲಿ ದಸರಾ ಆಯೋಜಕರು ವಿಫಲರಾಗಿದ್ದು, ಗಣ್ಯರ ಗೈರು ಹಿನ್ನೆಲೆ ಯುವ ದಸರಾ ಒಂದು ದಿನ ಮುಂದೂಡಿಕೆಯಾಗಿದೆ.  ಯುವ ದಸರಾ ಉದ್ಘಾಟನೆ ಮಾಡಬೇಕಿದ್ದ ನಟ ಸುದೀಪ್ ಗೈರಾದರೇ, ಇತ್ತ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಬೇಕಿದ್ದ ನಟ  ಶಿವರಾಜ್ ಕುಮಾರ್ ಸಹ ಗೈರಾಗಿದ್ದಾರೆ. ಹೀಗೆ ಗಣ್ಯಾತಿಗಣ್ಯರ ಗೈರು ಹಾಜರಿ ನಡುವೆಯೇ ಹಲವು ಕಾರ್ಯಕ್ರಮಗಳನ್ನ ಸರ್ಕಾರ ಮೊಟಕುಗೊಳಿಸಿದೆ.

ಹೆಲಿ ರೈಡ್, ಏರ್ ಶೋ, ಜಲಕ್ರೀಡೆ, ಪುಸ್ತಕ ಮೇಳ, ಚಿತ್ರ ಸಂತೆ ಸೇರಿ ಹಲವು ಕಾರ್ಯಕ್ರಮಗಳನ್ನ ಸರ್ಕಾರ ಕೈ ಬಿಟ್ಟಿದ್ದು ದಸರಾ ಸಂಭ್ರಮ ಕಳೆಗಟ್ಟಬೇಕಿದ್ಧ ಅರಮನೆ ನಗರಿ ಮೈಸೂರು ಬಣಗುಡುತ್ತಿದೆ. ಈ ಎಲ್ಲಾ ಅದ್ವಾನ, ಅವ್ಯವಸ್ಥೆಗಳಿಂದಾಗಿ ಹೋಟೆಲ್ ಉದ್ಯಮ ಸೇರಿ ಪ್ರವಾಸೋದ್ಯಮವೂ ಕೂಡ ಮಂಕಾಗಿದೆ.

Key words: Mysore dasara- inauguration-Yuva Dussehra- postponed..