ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ಮಾಜಿ‌ ಸಿಎಂ ಕುಮಾರಸ್ವಾಮಿ…

ಮೈಸೂರು,ನ,21,2019(www.justkannada.in): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿ  ಶಾಸಕ ತನ್ವೀರ್ ಸೇಠ್  ಅವರ ಆರೋಗ್ಯ ವಿಚಾರಿಸಿದರು.

ಆರೋಪಿ ಫರಾನ್ ಪಾಷಾನಿಂದ ಹಲ್ಲೆಗೊಳಗಾಗಿ  ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಶಾಸಕ ತನ್ವೀರ್ ಸೇಠ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಇಂದು ಆಸ್ಪತ್ರೆಗೆ ಭೇಟಿ ನೀಡಿ ತನ್ವೀರ್ ಸೇಠ್ ಅವರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ತನ್ವೀರ್ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು.

ಬಳಿಕ ಮಾತನಾಡಿದ ಹೆಚ್.ಡಿಕೆ, ದೇವರು ದೊಡ್ಡವನು, ಅಂತಹ ಘಟನೆಯಲ್ಲೂ ಅವರು ಬದುಕುಳಿದಿದ್ದಾರೆ. ಅವರ ಒಳ್ಳೆತನಕ್ಕೆ ದೇವರ ಆಶಿರ್ವಾದ ದೊರಕಿದೆ, ಅವರಿಗೆ ಪುನರ್ಜನ್ಮ ಸಿಕ್ಕಂತಾಗಿದೆ. ಬಹುಶಃ ಇವತ್ತು ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.

Key words: Former CM- Kumaraswamy -visit – Columbia Asia Hospital- Tanveer Seth’s-health-mysore