Tuesday, September 22, 2026

BDA Apartments

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಬಿಎಸ್ ವೈ B...
Home Front Page ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಬಿಎಸ್ ವೈ.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಬಿಎಸ್ ವೈ.

ಬೆಂಗಳೂರು,ಸೆಪ್ಟಂಬರ್,20,2022(www.justkannada.in): ಅನಾರೋಗ್ಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಬಿಎಸ್ ವೈ  ಅವರು ಹೆಚ್.ಡಿ ದೇವೇಗೌಡರ ಕಾಲಿಗೆ ನಮಸ್ಕರಿಸಲು ಮುಂದಾದರು. ಈ ವೇಳೆ ಹೆಚ್.ಡಿ ದೇವೇಗೌಡರು ಕೈಹಿಡಿದು ಬನ್ನಿ ಎಂದು ಆತ್ಮೀಯವಾಗಿ ಸ್ವಾಗತಿಸಿದರು.ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಬಿಎಸ್ ವೈ h...

ಹೆಚ್.ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಬಿಎಸ್ ಯಡಿಯೂರಪ್ಪ, ಹೆಚ್.ಡಿ ದೇವೇಗೌಡರು ನಮ್ಮೆಲ್ಲರಿಗೂ ಮಾರ್ಗದರ್ಶಕರು.  ಈಗಲೂ  ಹೆಚ್.ಡಿ ದೇವೇಗೌಡರಿಗೆ ಓಡಾಡಬೇಕೆಂಬ ಆಪೇಕ್ಷೆ ಇದೆ.  ಭೇಟಿ ವೇಳೆ ಅನೇಕ ಸಂಗತಿಗಳನ್ನ ನೆನಪು ಮಾಡಿಕೊಂಡರು.  ದೇವೇಗೌಡರು ಇನ್ನೂ ಹತ್ತಾರು ವರ್ಷ ಆರಾಮವಾಗಿ ಇರುತ್ತಾರೆ ಎಂದು ನುಡಿದರು.

Key words: Former CM –BSY- – health – former Prime Minister -HD Deve Gowda