Sunday, September 20, 2026

BDA Apartments

ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಮತ್ತೋರ್ವ ಶಿಕ್ಷಕನ ಬಂಧನ BDA JK_Adv BDA Adv
Home Crime ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಮತ್ತೋರ್ವ ಶಿಕ್ಷಕನ ಬಂಧನ.

ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಮತ್ತೋರ್ವ ಶಿಕ್ಷಕನ ಬಂಧನ.

ಬೆಂಗಳೂರು,ಸೆಪ್ಟಂಬರ್,21,2022(www.justkannada.in): 2014-15ರಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಇದೀಗ ಮತ್ತೋರ್ವ ಆರೋಪಿ ಶಿಕ್ಷಕನನ್ನ ಬಂಧಿಸಿದ್ದಾರೆ.

ಅಕ್ರಮ ವಾಗಿ ನೇಮಕಾತಿಯಾಗಿದ್ದ ಶಿಕ್ಷಕ ಅಶೋಕ್ ಚೌಹಾಣ್ ಬಂಧಿತ ಆರೋಪಿ.  ವಿಜಯಪುರ ಜಿಲ್ಲೆ ಬಸವನಬಾಗೇಡಿ ತಾಲ್ಲೂಕು ಭೈರವಾಡಗಿ ಗ್ರಾಮದ ಪ್ರೌಢಶಾಲೆ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದು  ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯದೇ ನೇಮಕವಾಗಿರುವ ಆರೋಪದ ಮೇಲೆ ಬಂಧಿಸಲಾಗಿದೆ.

ನೇಮಕಾತಿ ಪರೀಕ್ಷೆ ಬರೆಯದೇ ನೇಮಕಗೊಂಡು ಜಿಲ್ಲೆಗೆ ವರ್ಗಾವಣೆಯಾಗಿದ್ದ ಅಶೋಕ್ ಚೌಹಾಣ್ ನೇಮಕಾತಿ ಆದೇಶ ಪ್ರತಿ ಲಭ್ಯವಾಗಿದೆ. ಈವರೆಗೆ ಮೂವರು ಶಿಕ್ಷಕರ ಬಂಧನವಾಗಿದೆ. ಈಗಾಗಲೇ  ಮಹೇಶ್ ಸೂಸಲಾದಿ ಸಿದ್ರಾಮಪ್ಪ ಬಿರಾದಾರ್ ನನ್ನ ಸಸ್ಪೆಂಡ್ ಮಾಡಿ ಡಿಡಿಪಿಐ ಉಮೇಶ್ ಶೀರಹಟ್ಟಿಮಠ ಆದೇಶ ಹೊರಡಿಸಿದ್ದಾರೆ.

Ke words:  case -illegaly – recruitment – teacher- Arrest