ನದಿಯಲ್ಲಿ ಸ್ನಾನ ಮಾಡಲು ಹೋಗಿ ಸಹೋದರರಿಬ್ಬರು ನೀರುಪಾಲು.

ರಾಯಚೂರು,ಸೆಪ್ಟಂಬರ್,21,2022(www.justkannada.in): ನದಿಯಲ್ಲಿ ಸ್ನಾನ ಮಾಡಲು ಹೋದಾಗ ಸಹೋದರರಿಬ್ಬರು ನೀರುಪಾಲಾಗಿರುವ ಘಟನೆ   ದೇವದುರ್ಗ ತಾಲೂಕಿನ ಕೊಪ್ಪುರು ಗ್ರಾಮದ ಬಳಿ ನಡೆದಿದೆ.

ಕೊಪ್ಪುರು ಗ್ರಾಮದ ರಜಾಕ್ ಸಾಬ್​(35) ಮತ್ತು ಆತನ ತಮ್ಮ ಮೌಲಾಸಾಬ್​(32) ಮೃತಪಟ್ಟವರು. ಕೃಷ್ಣಾನದಿಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರೂ ಜಲಸಮಾಧಿಯಾಗಿದ್ದಾರೆ ಎನ್ನಲಾಗಿದೆ.

ಇಬ್ಬರೂ ಸಹೋದರರು ಕುಟುಂಬಸ್ಥರ ಜತೆ ಕೃಷ್ಣಾ ನದಿಗೆ ಬಂದಿದ್ದರು. ಈ ವೇಳೆ ನದಿಯಲ್ಲಿ ಸ್ನಾನ ಮಾಡಲು ಇಳಿದಾಗ ಇಬ್ಬರು ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Key words: Two brothers-death- river-swim