Tuesday, September 22, 2026

BDA Apartments

Home Front Page ಡಿಕೆಶಿ ಕೈಗೆ ಅಧಿಕಾರ ಬಂದಿದೆ: ಮೇಕೆದಾಟು ಯೋಜನೆ ಮಾಡಿ ತೋರಿಸಲಿ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಡಿಕೆಶಿ ಕೈಗೆ ಅಧಿಕಾರ ಬಂದಿದೆ: ಮೇಕೆದಾಟು ಯೋಜನೆ ಮಾಡಿ ತೋರಿಸಲಿ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು,ಜೂನ್,20,2026 (www.justkannada.in):  ಡಿಕೆ ಶಿವಕುಮಾರ್ ಕೈಗೆ ಅಧಿಕಾರ ಬಂದಿದೆ. ಮೇಕೆದಾಟು ಯೋಜನೆಯನ್ನ ಜಾರಿ ಮಾಡಿ ತೋರಿಸಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮೇಕೆದಾಟು ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ ಹೋರಾಟ ಮಾಡಿದರು. ಕೇವಲ ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಿದರೇ ಸಾಲದು. ತನ್ನ ಕೈಗೆ ಅಧಿಕಾರ ಬಂದಾಗ ಹೋರಾಟ ಮಾಡಿ ತೋರಿಸಬೇಕು. ಡಿಕೆ ಶಿವಕುಮಾರ್  ಕೈಗೆ ಅಧಿಕಾರ ಬಂದಿದೆ.  ಯೋಜನೆಯನ್ನ ಮಾಡಿ ತೋರಿಸಲಿ ಎಂದು ಒತ್ತಾಯಿಸಿದರು. ಡಿಕೆಶಿ ಕೈಗೆ ಅಧಿಕಾರ ಬಂದಿದೆ dks dks 3

ತಮಿಳುನಾಡಿನಲ್ಲೂ ಕಾಂಗ್ರೆಸ್ ಬೆಂಬಲಿತ ಸರ್ಕಾರವಿದೆ. ಎರಡೂ ಸರ್ಕಾರಗಳೂ ತಕ್ಷಣ ಮೇಕೆದಾಟು ಯೋಜನೆಯನ್ನು ಜಾರಿ ಮಾಡಬೇಕು. ಅದಕ್ಕಾಗಿ ಸಿಎಂ ಡಿಕೆ ಶಿವಕುಮಾರ್ ಗೆ ಆಗ್ರಹ ಮಾಡುತ್ತೇನೆ. ರಾಜಕೀಯ ಎಲ್ಲಾ ಮೇಲಾಟ ಬಿಟ್ಟು ಅಭಿವೃದ್ದಿ ಕಡೆ ಗಮನ ಕೊಡಿ ಮುಖ್ಯವಾಗಿ ಮೇಕೆದಾಟು ಯೋಜನೆ ಪೂರ್ಣಗೊಳಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.ಮೇಕೆದಾಟು ಯೋಜನೆ ಮಾಡಿ ತೋರಿಸಲಿ jk02_new jk02 new

Key words: DK Shivakumar, Mekedatu project, Union Minister, Shobha Karandlaje