Wednesday, October 7, 2026

BDA Apartments

Selfless service BDA JK_Adv BDA Adv
Home Cinema ದರ್ಶನ್ ದಾಂಪತ್ಯದಲ್ಲಿ ಮತ್ತೆ ಬಿರುಕು ?

ದರ್ಶನ್ ದಾಂಪತ್ಯದಲ್ಲಿ ಮತ್ತೆ ಬಿರುಕು ?

ಬೆಂಗಳೂರು, ಆಗಸ್ಟ್ 14, 2019 (www.justkannada.in):  ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ನಡುವೆ ಸಂಸಾರಲ್ಲಿ ಬಿರುಕು ಮೂಡಿದೆ ಎಂಬ ಅನುಮಾನ ಮೂಡಿದೆ.

ವಿಜಯಲಕ್ಷ್ಮಿ ತಮ್ಮ ಟ್ವಿಟರ್ ಖಾತೆಯಲ್ಲಿ ಇದೆಲ್ಲಾ ಆಧಾರ ರಹಿತ ಸುದ್ದಿ ಎಂದು ತಿರಸ್ಕರಿಸಿದರೂ ಇಬ್ಬರ ನಡುವೆ ಮನಸ್ತಾಪ ಉದ್ಬವಿಸಿದೆ ಎಂದು ಮೂಲಗಳು ತಿಳಿಸಿವೆ.

ಕಲಹ ನಡೆದಿದೆ ಎನ್ನಲಾದ ದಿನ ರಾತ್ರಿಯೇ ವಿಜಯಲಕ್ಷ್ಮಿ ತಮ್ಮ ಟ್ವಿಟರ್ ಖಾತೆ ಪ್ರೊಫೈಲ್ ಹೆಸರಿನಲ್ಲಿದ್ದ ದರ್ಶನ್ ಹೆಸರನ್ನು ಕಿತ್ತು ಹಾಕಿದ್ದರು. ಈಗ ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರೂ ತಮ್ಮ ಫಾಲೋವರ್ ಲಿಸ್ಟ್ ನಿಂದ ಪರಸ್ಪರರ ಹೆಸರು ಕಿತ್ತು ಹಾಕಿರುವುದು ಈ ಸುದ್ದಿಗೆ ಮತ್ತಷ್ಟು ಇಂಬು ನೀಡಿದೆ. ಆದರೆ ಅಧಿಕೃತವಾಗಿ ಇಬ್ಬರೂ ಈ ಬಗ್ಗೆ ತುಟಿ ಬಿಚ್ಚಿಲ್ಲ.