ನವದೆಹಲಿ,ಅಕ್ಟೋಬರ್,7,2026 (www.justkannada.in): ದೇಶಕ್ಕಾಗಿ ನಿಸ್ವಾರ್ಥ ಸೇವೆಯೇ ನನ್ನ ಜೀವನದ ಏಕೈಕ ಧ್ಯೇಯ. ನಾನು ರಾಜಕೀಯ ಮಹತ್ವಾಕಾಂಕ್ಷೆಗಾಗಿ ಬದುಕುವ ವ್ಯಕ್ತಿಯಲ್ಲ, ದೇಶಸೇವೆಯ ಮಿಷನ್‌ಗಾಗಿ ಬಂದವನು. ನನಗೆ ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ದೆಹಲಿಯಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 25 ವರ್ಷಗಳನ್ನು ಪೂರೈಸಿದ ತಮ್ಮ ಸುದೀರ್ಘ ರಾಜಕೀಯ ಪಯಣದ ಅನುಭವಗಳನ್ನು ಹಂಚಿಕೊಂಡರು.
ಈ ರಾಜಕೀಯ ಪಯಣದಲ್ಲಿ ಯಾರು ನನ್ನನ್ನೂ ಬೀಳಿಸಿದ್ದರೋ ಅವರೇ ನನ್ನನ್ನು ಮೇಲೆ ಏಳುವುದನ್ನು ಕೂಢ ಕಲಿಸಿಕೊಟ್ಟಿದ್ದಾರೆ. ಸೇವೆ ನಮ್ಮ ಧರ್ಮ ಹಾಗೂ ಕರ್ಮವಾಗಿದೆ. ನೀತಿಗಳು ನನ್ನನ್ನು ಸಹಾನುಭೂತಿಯ ಮಾರ್ಗ ತೋರಿಸಿವೆ. ಜೀವನದ ಪ್ರತಿ ಘಟನೆ ನನ್ನನ್ನು ಕಲಿಯಲು ಅವಕಾಶ ಕೊಟ್ಟಿದೆ. ಕಾರ್ಯಕರ್ತರ ಭರಪೂರ ಬೆಂಬಲವು ಕೂಡ ಸಿಕ್ಕಿದೆ ಎಂದರು.
ಈವರೆಗೆ ನನ್ನ ಜೀವನದಲ್ಲಿ ಯಾವ ಘಟನೆಯೂ ವ್ಯರ್ಥವಾಗಿಲ್ಲ. ಎಲ್ಲವೂ ಒಂದು ಅನುಭವವಾಗಿದೆ ಹೊಸತನವನ್ನು ಕಲಿತಿದ್ದೇನೆ. ನಮ್ಮ ಕನಸುಗಳು ದೊಡ್ಡದಾಗಿರಬೇಕು. ನನಗೆ ಯಾವತ್ತೂ ನಾನು ಒಬ್ಬನೇ ಇದ್ದೇನೆ ಅಂತಾ ಅನ್ನಿಸಿಲ್ಲ. ಕೋಟ್ಯಾಂತರ ಕಾರ್ಯಕರ್ತರು ನನ್ನ ಜೊತೆ ಇದ್ದಾರೆಂಬ ಭಾವನೆ. ಕೋಟಿ ಕೋಟಿ ಕಾರ್ಯಕರ್ತರ ಉಸಿರು ನನ್ನ ಜೊತೆಯಲ್ಲಿದೆ. ಪ್ರತಿಯೊಬ್ಬ ಕಾರ್ಯಕರ್ತನಿಗೂ ಹೃದಯಪೂರ್ವಕ ನಮನಗಳು. ಕೋಟ್ಯಾಂತರ ಸ್ವಯಂ ಸೇವಕರು. ಈ ದೇಶದ ಸಂಸ್ಕೃತಿಯ ಭಾಗ ಭಾರತಮಾತೆಯ ನಿಸ್ವಾರ್ಥ ಸೇವೆಯೇ ಅವರ ಗುರಿ. ನಾನು ಇಂತಹ ನಿಸ್ವಾರ್ಥ ಸೇವಕರಿಗೆ ನಮನ ಕಾರ್ಯಕರ್ತರ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದರು.
ಆತ್ಮ ನಿರ್ಭರ್ ಭಾರತ್ ನಾವು ಮುಂದುವರೆಸುತ್ತೇವೆ ಅರ್ಥವ್ಯವಸ್ಥೆಯಲ್ಲಿ ವಿಶ್ವದ 3ರಲ್ಲಿ ಭಾರತ ಇರಲಿದೆ. ದೇಶದ ಮುಂದೆ ಅಧಿಕಾರ ಪ್ರತಿಷ್ಠೆ ದೊಡ್ಡದಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು.
Key words: Selfless service, sole mission, PM Modi, Evolved India Resolution







