Wednesday, October 7, 2026

BDA Apartments

Home Front Page ‘ಕೈ’ ನಾಯಕ ರಾಹುಲ್ ಗಾಂಧಿ ಸೇರಿ ಹಲವರ ವಿರುದ್ದ ದೂರು ದಾಖಲು

‘ಕೈ’ ನಾಯಕ ರಾಹುಲ್ ಗಾಂಧಿ ಸೇರಿ ಹಲವರ ವಿರುದ್ದ ದೂರು ದಾಖಲು

ನವದೆಹಲಿ,ಅಕ್ಟೋಬರ್,7,2026 (www.justkannada.in): ಕೇಂದ್ರ ಮುಖ್ಯ ಚುನಾವಣಾ ಆಯುಕ್ತ  ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಿನ್ನೆ ಪ್ರತಿಭಟನೆ ನಡೆಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಹಲವರ ವಿರುದ್ದ ದೂರು ದಾಖಲಾಗಿದೆ.

ಆಕಾಶವಾಣಿ ಭವನಕ್ಕೆ  ಅನಧಿಕೃತವಾಗಿ ಪ್ರವೇಶಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ. ಆಕಾಶವಾಣಿ ಭವನದ ಅಧಿಕಾರಿಗಳು ಸಂಸತ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.Complaint rahul

ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ  ಇಂಡಿಯಾ ಒಕ್ಕೂಟದ ನಾಯಕರು ಪ್ರತಿಭಟನೆ  ನಡೆಸಿ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದರು. ಈ ವೇಳೆ ದೆಹಲಿ ಪೊಲೀಸರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ವಶಕ್ಕೆ ಪಡೆದಿದ್ದರು.Complaint jk02_new jk02 new

 

English Summary
Title

FIR Against Rahul Gandhi & Congress Leaders Over ECI Protest in Delhi

Short Description
Delhi Police have filed an FIR against Congress leaders Rahul Gandhi and Priyanka Gandhi Vadra following an intense opposition protest in New Delhi. The "Save Democracy" march, organized by the INDIA bloc to demand the resignation of the Chief Election Commissioner over alleged voter list discrepancies, was halted near the Election Commission (ECI) headquarters. Blocked by barricades, leaders staged a massive sit-in at Akashvani Bhawan. Police later detained around 260 protestors and registered a case of illegal trespassing based on a complaint by Akashvani staff, while the BJP dismissed the entire demonstration as political drama.
Keywords
Complaint, against, Congress leader, Rahul Gandhi, protest