Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Cinema ಬಹುಕಾಲದ ಗೆಳೆಯನ ಜೊತೆ ರಮ್ಯಾ ಮದುವೆ ?

ಬಹುಕಾಲದ ಗೆಳೆಯನ ಜೊತೆ ರಮ್ಯಾ ಮದುವೆ ?

ಬೆಂಗಳೂರು, ಆಗಸ್ಟ್ 14, 2019 (www.justkannada.in): ಎರಡು ವರ್ಷಗಳಿಂದ ಹೆಚ್ಚಾಗಿ ಕಾಣಿಸಿಕೊಳ್ಳದ ನಟಿ, ಮಾಜಿ ಸಂಸದೆ ರಮ್ಯಾ ಮದುವೆಯಾಗಲು ನಿರ್ಧರಿಸಿದ್ದಾರೆ.

37 ವರ್ಷದ ರಮ್ಯಾ ನಟಿಯಾಗಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಅವರ ಮದುವೆಯ ಬಗ್ಗೆ ಹಲವಾರು ಗಾಳಿಸುದ್ದಿಗಳು ಹರಿದಾಡಿದ್ದವು. ಇದೀಗ ರಮ್ಯಾ ನಿಜವಾಗಲೂ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆಗೆ ರಮ್ಯಾ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಏಳೆಂಟು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿರುವ ಪೋರ್ಚುಗಲ್’ನ ರಾಫೆಲ್​- ರಮ್ಯಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.