Tuesday, September 22, 2026

BDA Apartments

Home Front Page ಕಮಿಷನ್ ಆರೋಪದ ಹಿಂದೆ ಕಾಂಗ್ರೆಸ್ ಕೈವಾಡ: ಕೆಂಪಣ್ಣ ದಾಖಲೆ ನೀಡಿ ಮಾತಾನಾಡಲಿ- ಸಚಿವ ಭೈರತಿ ಬಸವರಾಜ್.

ಕಮಿಷನ್ ಆರೋಪದ ಹಿಂದೆ ಕಾಂಗ್ರೆಸ್ ಕೈವಾಡ: ಕೆಂಪಣ್ಣ ದಾಖಲೆ ನೀಡಿ ಮಾತಾನಾಡಲಿ- ಸಚಿವ ಭೈರತಿ ಬಸವರಾಜ್.

ಬೆಂಗಳೂರು,ಆಗಸ್ಟ್, 27,2022(www.justkannada.in):  ಸರ್ಕಾರದ ವಿರುದ್ಧ ಮಾಡಿರುವ ಕಮಿಷನ್ ಆರೋಪದ ಹಿಂದೆ ಕಾಂಗ್ರೆಸ್ ಕೈವಾಡವಿದೆ.  ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೂಕ್ತ ದಾಖಲೆ ನೀಡಿ ನಂತರ ಮಾತನಾಡಲಿ ಎಂದು ಸಚಿವ ಭೈರತಿ ಬಸವರಾಜ್ ಕಿಡಿಕಾರಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ಭೈರತಿ ಬಸವರಾಜ್,  ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ.  ಕೆಂಪಣ್ಣ ಸೂಕ್ತ ದಾಖಲೆ ನೀಡಿ ಮಾತನಾಡಲಿ. ಸಚಿವರ ವಿರುದ್ಧ ಸುಮ್ಮನೇ ಆರೋಪ ಸರಿಯಲ್ಲ. ನಾವು ಯಾವುದೇ ಕಮಿಷನ್ ತೆಗೆದುಕೊಂಡಿಲ್ಲ ಎಂದರು.ಕಮಿಷನ್ ಆರೋಪದ ಹಿಂದೆ ಕಾಂಗ್ರೆಸ್ ಕೈವಾಡ minister bairati basavaraj talk about congress and siddu

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರ ಕುರಿತು ಮಾತನಾಡಿದ ಸಚಿವ ಭೈರತಿ ಬಸವರಾಜ್,  ಹೈಕೋರ್ಟ್ ಆದೇಶ ಗೌರವಿಸುತ್ತೇವೆ.  ಈದ್ಗಾದಲ್ಲಿ ಹಬ್ಬ ಆಚರಿಸಲು ಎಲ್ಲರಿಗೂ ಆಸೆ ಇದೆ. ಎಲ್ಲರ ಆಸೆ ಈಡೇರಲಿದೆ ಎಂದರು.

Key words: Congress – behind – Commission’s –allegations-Minister- Bhairati Basavaraj