ಮುರುಘ ಶ್ರೀಗಳ ವಿರುದ್ಧ ಎಫ್ ಐಆರ್:  ಇದು ನನಗೆ ಆಶ್ಚರ್ಯ ತಂದ ವಿಚಾರವಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ರಾಮನಗರ,ಆಗಸ್ಟ್,27,2022(www.justkannada.in):  ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಚಿತ್ರದುರ್ಗದ ಮುರುಘಾಮಠದ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಈ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ರಾಮನಗರದಲ್ಲಿ ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಇದು ನನಗೆ ಆಶ್ಚರ್ಯ ತಂದ ವಿಚಾರವಲ್ಲ. ಈ ಬಗ್ಗೆ 5-6 ತಿಂಗಳ ಹಿಂದೆ ಹಲವಾರು ಚರ್ಚೆ ನಡೆದಿವೆ. ಈ ವಿಚಾರವನ್ನ ಪ್ರಾರಂಭಿಕ ಹಂತದಲ್ಲೇ ಮುಂಜಾಗ್ರತೆ ವಹಿಸಬೇಕಿತ್ತು. ಇದು ಧಾರ್ಮಿಕ ಕ್ಷೇತ್ರದ ಮೇಲೆ ಬೇರೆ ಪರಿಣಾಮ ಬೀರಬಾರದು. ಈಗಾಗಲೇ ಒಂದು ಬಾರಿ ಹೊಸನಗರ ಶ್ರೀಗಳ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಈಗ ಮುರುಘಾ ಶ್ರೀಗಳ ವಿರುದ್ಧ ಕೇಳಿ ಬಂದಿದೆ.

ನಮ್ಮ ನಮ್ಮ ಭಾವನೆಗಳಿಗೆ ಧಕ್ಕೆಯಾಗಬಾರದು. ಕಾನೂನು ಬಾಹಿರವಾಗಿ ನಡೆದಿದ್ರೆ ಸರ್ಕಾರ ತೀರ್ಮಾನಕ್ಕೆ ಬರಬೇಕು  ಎಂದಿದ್ದಾರೆ.

Key words: Muruga Shri – FIR-Former CM -HD Kumaraswamy.