Wednesday, September 30, 2026

BDA Apartments

Mysore Dasara Festival BDA JK_Adv BDA Adv
Home Front Page ಪ್ರವೀಣ್ ಹತ್ಯೆಯಾದ ನೋವು ನಮಗೂ ಇದೆ: ಕಾರ್ಯಕರ್ತರು ರಾಜೀನಾಮೆ ಕೊಡದೇ ಒಗ್ಗಟ್ಟಾಗಿರಬೇಕು- ಕೆ.ಎಸ್ ಈಶ್ವರಪ್ಪ.

ಪ್ರವೀಣ್ ಹತ್ಯೆಯಾದ ನೋವು ನಮಗೂ ಇದೆ: ಕಾರ್ಯಕರ್ತರು ರಾಜೀನಾಮೆ ಕೊಡದೇ ಒಗ್ಗಟ್ಟಾಗಿರಬೇಕು- ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಆಗಸ್ಟ್,2,2022(www.justkannada.in):  ಶಿವಮೊಗ್ಗದಲ್ಲಿ ಹರ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾದ ನೋವು ನಮಗೂ ಇದೆ. ಕಾರ್ಯಕರ್ತರು ರಾಜೀನಾಮೆ ಕೊಡದೆ ಒಗ್ಗಟ್ಟಾಗಿರಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಪ್ರವೀಣ್‌ ಹತ್ಯೆ ಆಗಿದ್ದು ನಮಗೂ ನೋವು ಇದೆ. ಸರ್ಕಾರದ ವಿರುದ್ಧ ಅಸಮಾಧಾನವಿರಬಹುದು. ಆದರೆ ರಾಜೀನಾಮೆ ಕೊಡುವ ಬದಲು ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಹೇಳಿದರು.

ಚಕ್ರವರ್ತಿ ಸೂಲಿಬೆಲೆ ಟ್ವಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಚಕ್ರವರ್ತಿ ಸೂಲಿಬೆಲೆ ದೇಶಭಕ್ತ.  ಹಿಂದೆಯೂ ನಮ್ಮ ಕಾರ್ಯಕರ್ತರನ್ನ ಕಳೆದುಕೊಂಡಿದ್ದೇವೆ. ಚಕ್ರವರ್ತಿ ಸೂಲಿಬೆಲೆಯಂತೆ ನಮಗೂ ಸಿಟ್ಟಿದೆ ಎಂದು ಹೇಳಿದರು.

Key words: We – feel – pain – Praveen’s- murder-Former minister-KS Eshwarappa.