Sunday, September 13, 2026

BDA Apartments

Home Front Page ಡಿಕೆ ಶಿವಕುಮಾರ್ ಗೆ ಖೆಡ್ಡಾ ತೋಡಲು ಸಿದ್ಧರಾಮೋತ್ಸವ: ಸಿದ್ದು ನೇತೃತ್ವದಲ್ಲಿ ಕಾಂಗ್ರೆಸ್ ಸರ್ವನಾಶ – ಬಿಜೆಪಿ...

ಡಿಕೆ ಶಿವಕುಮಾರ್ ಗೆ ಖೆಡ್ಡಾ ತೋಡಲು ಸಿದ್ಧರಾಮೋತ್ಸವ: ಸಿದ್ದು ನೇತೃತ್ವದಲ್ಲಿ ಕಾಂಗ್ರೆಸ್ ಸರ್ವನಾಶ – ಬಿಜೆಪಿ ನಾಯಕರಿಂದ ಟೀಕೆ

ಬೆಂಗಳೂರು,ಆಗಸ್ಟ್,2,2022(www.justkannada.in): ನಾಳೆ ದಾವಣಗೆರೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಜನ್ಮದಿನದ ಅಂಗವಾಗಿ ಸಿದ್ಧರಾಮೋತ್ಸವ ಕಾರ್ಯಕ್ರಮ ನಡೆಯಲಿದ್ದು ಈ ಬಗ್ಗೆ ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಶಾಸಕ ಪಿ.ರಾಜೀವ್, ಡಿಕೆ ಶಿವಕುಮಾರ್ ಗೆ ಖೆಡ್ಡಾ ತೋಡಲು ಸಿದ್ದರಾಮೋತ್ಸವ  ನಡೆಸುತ್ತಿದ್ದಾರೆ. ಹಿಂದೆ ಕೈ ಹೈಕಮಾಂಡ್ ಗೆ ಪವರ್ ಇತ್ತು. ಇಂದು ಸ್ವತಃ ರಾಹುಲ್ ಗಾಂಧಿ ಅಸಹಾಯಕರಾಗಿದ್ದಾರೆ. ಡಿಕೆಶಿಯದ್ದು ಅರಣ್ಯರೋದನವಾಗಿದೆ, ಸಿದ್ದು ನೇತೃತ್ವದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಲೇವಡಿ ಮಾಡಿದರು.

ಹಾಗೆಯೇ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾಯಿ ಹಸಿದಿತ್ತು ಅನ್ನ ಹಳಸಿತ್ತು ಅನ್ನೋ ರೀತಿ ಆಗಿದೆ. ಕಾಂಗ್ರೆಸ್ ಗೆ ಅಧಿಕಾರದ ದಾಹ ಹೆಚ್ಚಗಿದೆ. ಸಿದ್ದರಾಮಯ್ಯಗೂ ಅಧಿಕಾರದ ದಾಹ ಇದೆ. ಸಿದ್ಧರಾಮಯ್ಯ  ಮುಂದೆ ಹೈಕಮಾಂಡ್ ಮಂಡಿಯೂರಿದೆ. ಸಿದ್ದುಗೆ ಕಾಂಗ್ರೆಸ್ ಹೈಕಮಾಂಡ್ ಚಿಕ್ಕದಾಗಿ ಕಾಣಿಸುತ್ತಿದೆ ಎಂದು ವ್ಯಂಗ್ಯವಾಡಿದರು.

Key words: Siddharamotsava – DK Shivakumar-Congress- BJP –leaders-critisize