Wednesday, September 30, 2026

BDA Apartments

Home Front Page ಎಸ್‌ ಐಆರ್‌ ಪೂರ್ಣಗೊಂಡ ರಾಜ್ಯಗಳಲ್ಲಿ ಫಾರ್ಮ್-6 ಘೋಷಣೆ ಹಿಂಪಡೆದ  ಚುನಾವಣಾ ಆಯೋಗ

ಎಸ್‌ ಐಆರ್‌ ಪೂರ್ಣಗೊಂಡ ರಾಜ್ಯಗಳಲ್ಲಿ ಫಾರ್ಮ್-6 ಘೋಷಣೆ ಹಿಂಪಡೆದ  ಚುನಾವಣಾ ಆಯೋಗ

ನವದೆಹಲಿ,ಸೆಪ್ಟಂಬರ್‌,30,2026 (www.justkannada.in) ECINET ಆಯಪ್, ಪೋರ್ಟಲ್ ಹಾಗೂ ಸಂಬಂಧಪಟ್ಟ ಮುಖ್ಯ ಚುನಾವಣಾಧಿಕಾರಿಗಳ (CEO) ಪೋರ್ಟಲ್ ‌ಗಳಿಂದ ಹೆಚ್ಚುವರಿಯಾಗಿ ಸೇರಿಸಲಾಗಿದ್ದ  ಎಸ್‌ ಐಆರ್‌  ಸಂಬಂಧಿತ ಫಾರ್ಮ್-6 ಅನ್ನು ಕೇಂದ್ರ ಚುನಾವಣಾ ಆಯೋಗ ಹಿಂಪಡೆದಿದೆ.

ಎಸ್‌ ಐಆರ್‌ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಆನ್‌ ಲೈನ್ ಮತದಾರರ ನೋಂದಣಿ ಅರ್ಜಿ ಫಾರ್ಮ್-6 ನಲ್ಲಿ ಹೆಚ್ಚುವರಿಯಾಗಿ ಸೇರಿಸಲಾಗಿದ್ದ  ಎಸ್‌ ಐಆರ್‌  ಸಂಬಂಧಿತ ಘೋಷಣೆಯನ್ನು ಚುನಾವಣಾ ಆಯೋಗ ಹಿಂಪಡೆದಿದೆ.

SIR ಪ್ರಕ್ರಿಯೆ ನಡೆಯುತ್ತಿರುವ ಅವಧಿಯಲ್ಲಿ ಮಾತ್ರ ಈ ಹೆಚ್ಚುವರಿ ಘೋಷಣೆ ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗ ನಿರ್ಧರಿಸಿದ ಕೆಲ ದಿನಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚುವರಿ ಘೋಷಣೆಯಲ್ಲಿ ಹೊಸದಾಗಿ ಮತದಾರರಾಗಿ ನೋಂದಣಿಗೆ ಅರ್ಜಿ ಸಲ್ಲಿಸುವವರು, ತಾವು ಅಥವಾ ತಮ್ಮ ತಂದೆ-ತಾಯಿ ಅಥವಾ ಅಜ್ಜ-ಅಜ್ಜಿ ಹಿಂದಿನ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಸಿದ್ಧಪಡಿಸಲಾದ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದ ಬಗ್ಗೆ ವಿವರಗಳನ್ನು ನೀಡಬೇಕಾಗಿತ್ತು.Election Commission jk02

SIR ಪ್ರಕ್ರಿಯೆ ಇನ್ನೂ ನಡೆಯುತ್ತಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಘೋಷಣೆ ECINET ಪೋರ್ಟಲ್‌ ನಲ್ಲಿ ಮುಂದುವರಿಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

 

English Summary
Title

ECI Removes Form 6 Declaration as Special Intensive Revision Concludes

Short Description
The Election Commission of India (ECI) has withdrawn the additional Special Intensive Revision (SIR) declaration from online Form 6 on the ECINET portal. Following a high-level commission meeting, this rollback applies strictly to states and union territories where the intensive enumeration exercise is now completed. For new applicants in these completed zones, voter registration reverts to the standard statutory Form 6 requirements under the Registration of Electors Rules, 1960. This update removes the need for extra family mapping data and historical details, significantly simplifying the online voter enrollment process for citizens in non-SIR regions.
Keywords
Election Commission, withdraws, Form-6 declaration, SIR, completed.