Thursday, July 30, 2026

BDA Apartments

Home Cinema ಶಂಕರ್ ಅಶ್ವಥ್ ಫೋಸ್ಟ್’ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮೆಚ್ಚುಗೆ

ಶಂಕರ್ ಅಶ್ವಥ್ ಫೋಸ್ಟ್’ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮೆಚ್ಚುಗೆ

ಬೆಂಗಳೂರು, ಮೇ 10, 2019 (www.justkannada.in): ಹಿರಿಯ ನಟ ಶಂಕರ್ ಅಶ್ವಥ್ ಫೇಸ್‍ಬುಕ್‍ನಲ್ಲಿ ತಂದೆ ಬಗ್ಗೆ ಒಂದು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ನನ್ನ ತಂದೆ ನನ್ನನ್ನು ನೋಡಿ ಶಭಾಷ್ ಮಗನೆ ನ್ಯಾಯವಾಗಿ ಧರ್ಮವಾಗಿ ನನಗೆ ಇಷ್ಟವಾದ ರೀತಿಯಲ್ಲಿ ಬದುಕುತ್ತಿದ್ದೀಯಾ”, ಅಂದರೆನೋ ಅನ್ನಿಸಿತು. ಊಬರ್ ಸೇವೆಯಲ್ಲಿ ತೊಡಗಿದ್ದಾಗ ದಾರಿಯಲ್ಲಿ ಯಾರೋ ಮಹಾನುಭಾವರು ನನ್ನ ತಂದೆಯ ಫೋಟೋವನ್ನು ಗೋಡೆ ಮೇಲೆ ಲ್ಯಾಮಿನೇಟ್ ಮಾಡಿ ಹಾಕಿಸಿದ್ದಾರೆ. ಅಲ್ಲಿ ಒಂದು ಕ್ಷಣ ನಿಂತು ಹೃದಯಪೂರ್ವಕವಾಗಿ ನಮಿಸಿ ಮುಂದೆ ಹೊರಟೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಶಂಕರ್ ಅಶ್ವಥ್ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. “ನಿಮ್ಮ ತಂದೆಯವರು ತುಂಬಾ ಒಳ್ಳೆಯ ವ್ಯಕ್ತಿ. ಅವರ ಮಗನಾಗಿ ನೀವು ಒಳ್ಳೆಯವರೆ. ಜೀವನದಲ್ಲಿ ಸ್ವಲ್ಪ ಎಡವಿರಬಹುದು ಆದರೆ ಎಂದಿಗೂ ಹೆದರಬೇಡಿ ಒಂದಿಲ್ಲೊಂದು ದಿನಾ ನಿಮಗೂ ಒಳ್ಳೆಯ ಕಾಲ ಬರುತ್ತದೆ. ನಿಮ್ಮನ್ನು ಮರೆತ ಚಿತ್ರರಂಗ ಒಂದಿನ ನಿಮ್ಮ ಕಾಲಿನ ಬಳಿ ಬರುತ್ತದೆ ನೀವು ಕರ್ನಾಟಕದ ಅತಿ ದೋಡ್ಡ ಚಿತ್ರ ನಿರ್ಮಾಪಕರಾಗಲಿ ಎಂದು ಹರಸುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.