Thursday, August 6, 2026

BDA Apartments

Home Front Page ಅಗ್ನಿಪಥ್ ಯೋಜನೆಗೆ ವಿರೋಧ: ಹಿಂಸಾತ್ಮಕ ಪ್ರತಿಭಟನೆ ಬೇಡ- ಮಾಜಿ ಸಿಎಂ ಸಿದ್ಧರಾಮಯ್ಯ ಮನವಿ.

ಅಗ್ನಿಪಥ್ ಯೋಜನೆಗೆ ವಿರೋಧ: ಹಿಂಸಾತ್ಮಕ ಪ್ರತಿಭಟನೆ ಬೇಡ- ಮಾಜಿ ಸಿಎಂ ಸಿದ್ಧರಾಮಯ್ಯ ಮನವಿ.

ಹುಬ್ಬಳ್ಳಿ,ಜೂನ್,18,2022(www.justkannada.in):  ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ನಮ್ಮ ವಿರೋಧವಿದೆ. ಆದರೆ ಯಾರೂ ಸಹ ಹಿಂಸಾತ್ಮಕ ಪ್ರತಿಭಟನೆ ನಡೆಸಬಾರದು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಮನವಿ ಮಾಡಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿದ‍್ಧರಾಮಯ್ಯ, ಅಗ್ನಿ ಪಥ್ ಯೋಜನೆಗೆ ಆಯ್ಕೆಯಾದವರು ನಾಲ್ಕು ವರ್ಷದ ಬಳಿಕ ಏನು ಮಾಡಬೇಕು ಅವರ ಗತಿ ಏನು..? ಎಂದು ಪ್ರಶ್ನಿಸಿದರು. ಹಾಗೆಯೇ ಯಾರೂ ಹಿಂಸಾತ್ಮಕ ಪ್ರತಿಭಟನೆ ಮಾಡಬಾರದು ಆದೇಶ ಹಿಂಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸಬಾರದು ಎಂದು ಹೇಳಿದರು.

ತಮ್ಮ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನಾನು ಜಾತಿ ನಿಂದನೆ ಮಾಡಿಯೇ ಇಲ್ಲ. ಇದು ಆರ್ ಎಸ್ ಎಸ್, ಬಿಜೆಪಿಯವರ ಹುನ್ನಾರ ಎಂದು ಟೀಕಿಸಿದರು.

Key words: Opposition – Agnipath- project-Former CM -Siddaramaiah