ಅಗ್ನಿಪಥ್ ಯೋಜನೆ ಜಾರಿಗೆ ಮುಂದಾದ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ.

ನವದೆಹಲಿ,ಜೂನ್,18,2022(www.justkannada.in): ಅಗ್ನಿಪಥ್ ಯೋಜನೆ ಜಾರಿಗೆ ಮುಂದಾದ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಅಗ್ನಿಪಥ್ ಯೋಜನೆ ಜಾರಿ ವಿರೋಧಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 8 ವರ್ಷಗಳಿಂದ ರೈತರು, ಸೈನಿಕರಿಗೆ ಕೇಂದ್ರ ಸರ್ಕಾರ ಅಪಮಾನ ಮಾಡಿದೆ.  ಜೈಜವಾನ್ ಜೈ ಕಿಸಾನ್  ಮೌಲ್ಯಗಳಿಗೆ ಬಿಜೆಪಿ ಅಪಮಾನ ಮಾಡಿದೆ.

ಕರಾಳ ಕೃಷಿ ಕಾಯ್ದೆ ಹಿಂಪಡೆಯಬೇಕು ಎಂದಿದ್ದೆ. ಅದೇ ರೀತಿ ಅಗ್ನಿಪಥ್ ಯೋಜನೆ ಹಿಂಪಡೆಯಲೇಬೇಕು.  ದೇಶದ ಯುವಕರ ಆಗ್ರಹಕ್ಕೆ ಸರ್ಕಾರ ಮಣಿಯಲೇ ಬೇಕು ಮಾಫಿವೀರ್ ಆಗಿ ಅಗ್ನಿಪಥ್ ಯೋಜನೆ ಹಿಂಪಡೆಯಲೇ ಬೇಕು ಎಂದು ಆಗ್ರಹಿಸಿದರು.

Key words: Congress-leader-Rahul Gandhi -against – Agnipath project.