Friday, August 7, 2026

BDA Apartments

Home Crime ಗಂಡನ ಮನೆಯಲ್ಲಿ ಗೃಹಿಣಿ ಆತ್ಮಹತ್ಯೆ: ಎರಡು ಕುಟುಂಬಗಳ ನಡುವೆ ಮಾರಾಮಾರಿ.

ಗಂಡನ ಮನೆಯಲ್ಲಿ ಗೃಹಿಣಿ ಆತ್ಮಹತ್ಯೆ: ಎರಡು ಕುಟುಂಬಗಳ ನಡುವೆ ಮಾರಾಮಾರಿ.

ಹಾಸನ,ಮೇ,23,2022(www.justkannada.in):  ಗಂಡನ ಮನೆಯಲ್ಲಿ ಗೃಹಿಣಿ ನೇಣುಬಿಗಿದು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದ ವಿದ್ಯಾನಗರದಲ್ಲಿ  ನಡೆದಿದೆ.

ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದ ರಂಜಿತಾ(31) ಆತ್ಮಹತ್ಯೆಗೆ ಶರಣಾದವರು. ಪತಿ ಹಾಗೂ ಅತ್ತೆ ಮಾವನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದ ರಂಜಿತಾ(31) ಳನ್ನ ಹಾಸನದ ಅಕ್ಷಯ್ ಗೆ ಮಧುವೆಮಾಡಲಾಗಿತ್ತು.

ಗಂಡನ ಮನೆಯವರು  ರಂಜಿತಾಗೆ ಕಿರುಕುಳ  ನೀಡುತ್ತಿದ್ದರು ಎನ್ನಲಾಗಿದೆ.  ಗಂಡನ ಮನೆಯವರೇ ಹತ್ಯೆಮಾಡಿ ನೇಣು ಹಾಕಿದ್ದಾರೆ ಎಂದು  ಗೃಹಿಣಿ ಪೋಷಕರು ಆರೋಪಿಸಿದ್ದಾರೆ. ಮಗಳ ಸಾವಿನಿಂದ ರೊಚ್ಚಿಗೆದ್ದ ರಂಜಿತಾ ಸಂಬಂಧಿಕರು ಅಕ್ಷಯ್ ಮನೆ ಮುಂದೆ ಗಲಾಟೆ ನಡೆಸಿದ್ದು, ಪತಿ ಪತ್ನಿ ಕುಟುಂಬಸ್ಥರ ನಡುವೆ ಭಾರಿ ಮಾರಾಮಾರಿ ನಡೆದಿದೆ. ಈ ವೇಳೆ ಸ್ಥಳಕ್ಕೆ ಬಂದ ಪೋಲಿಸರು ಉದ್ರಿಕ್ತರನ್ನ ಚದುರಿಸಿದ್ದಾರೆ.  ಸ್ಥಳದಲ್ಲಿ ಬಿಗುಬಿನ ವಾತಾವರಣ ನಿರ್ಮಾಣವಾಗಿದೆ.

Key words: Housewife-suicide – husband’s- house-hassan