ಎರಡು ಸ್ಥಾನಗಳಿಗೆ 200 ಜನ ಆಕಾಂಕ್ಷಿಗಳು: ಇಂದು ರಾತ್ರಿಯೇ ಕಾಂಗ್ರೆಸ್ ಟಿಕೆಟ್ ಘೋಷಣೆ- ಡಿ.ಕೆ ಶಿವಕುಮಾರ್.

ನವದೆಹಲಿ,ಮೇ,23,2022(www.justkannada.in): ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಎರಡು ಸ್ಥಾನಗಳಿಗೆ 200 ಜನ ಆಕಾಂಕ್ಷಿಗಳಿದ್ದಾರೆ. ಎಲ್ಲರಿಗೂ ಟಿಕೆಟ್ ನೀಡುವುದು ಕಷ್ಟ. ಇಂದು ರಾತ್ರಿಯೇ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಲಾಗುತ್ತದೆ.  ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಹೈಕಮಾಂಡ್ ಗೆ ಅಭ್ಯರ್ಥಿಗಳ ಪಟ್ಟಿ ಸಲ್ಲಿಸಿದ್ದೇವೆ. ನಾನು ಸಿದ್ಧರಾಮಯ್ಯ ಚರ್ಚಿಸಿ ಪಟ್ಟಿ ಸಲ್ಲಿಸಿದ್ದೇವೆ. ಅಭ್ಯರ್ಥಿಗಳ ಪಟ್ಟಿ ಪಡೆದು ವಾಪಸ್ ಹೋಗುವೆ. ಎರಡು ಸ್ಥಾನಗಳಿಗೆ 200 ಜನ ಆಕಾಂಕ್ಷಿಗಳಿದ್ದಾರೆ. ಎಲ್ಲರಿಗೂ ಟಿಕೆಟ್ ನೀಡುವುದು ಕಷ್ಟ.  ಟಿಕೆಟ್ ಕೇಳದೆ ಇರುವವರು ಅಭ್ಯರ್ಥಿಯಾಗಲು ಅರ್ಹರು. ಟಿಕೆಟ್ ಹಂಚಿಕೆಯಲ್ಲಿ ಸಾಮಾಜಿಕ  ನ್ಯಾಯ ಕಾಯ್ದುಕೊಳ್ಳುತ್ತೇವೆ. ಟಿಕೆಟ್ ಕೇಳದವರನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದರು.

ಸೋನಿಯಾಗಾಂಧಿ ಮತ್ತು ಸುರ್ಜೇವಾಲರನ್ನ ಭೇಟಯಾಗಿಲ್ಲ. ರಾಜ್ಯದಲ್ಲೂ ಕಾಂಗ್ರೆಸ್ ಚಿಂತನಾ ಶಿಬಿರವನ್ನ ಆಯೋಜನೆ ಮಾಡಲಾಗುತ್ತದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: 200 aspirants – two –positions- Congress- ticket-DK Shivakumar.