Thursday, August 6, 2026

BDA Apartments

Home Front Page ಮತ್ತೊಮ್ಮೆ ಅವಕಾಶ ಕೊಟ್ಟರೆ ಸಾಲಮನ್ನಾ ಮಾಡುವೆ- ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಸಿದ್ಧರಾಮಯ್ಯ.

ಮತ್ತೊಮ್ಮೆ ಅವಕಾಶ ಕೊಟ್ಟರೆ ಸಾಲಮನ್ನಾ ಮಾಡುವೆ- ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಸಿದ್ಧರಾಮಯ್ಯ.

ಬೆಂಗಳೂರು,ಮೇ,18,2022(www.justkannada.in): ನಾನು ಸಿಎಂ ಆಗಿದ್ದಾಗ ಸಾಲಮನ್ನಾ ಮಾಡಿದ್ದೆ. ಈಗ ಮತ್ತೊಮ್ಮೆ ಅವಕಾಶ ಕೊಟ್ಟರೆ ಸಾಲಮನ್ನಾ ಮಾಡುತ್ತೇನೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸ್ವಾಭಿಮಾನಿ ದಲಿತ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸರ್ಕಾರ  7950  ಕೋಟಿ ರೂ ಹಣವನ್ನ ಡೈವರ್ಟ್ ಮಾಡಿದ್ದಾರೆ. ಇದು ದಲಿತರಿಗೆ  ಮಾಡಿದ ಮೋಸ ಅಲ್ಲವೇ..?. ಇದರ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ ನಿಮ್ಮ ಹಣವನ್ನ ಖರ್ಚು ಮಾಡಿದ್ದಾರೆ.  ದಲಿತರಿಗೆ ಗುತ್ತಿಗೆ ಮೀಸಲಾತಿ ತಂದಿದ್ದು ನಾನು. 50 ಲಕ್ಷದಿಂದ  1 ಲಕ್ಷಕ್ಕೆ ಹೆಚ್ಚಿಸಿದ್ದೆ. ಆದರೆ ಮೈತ್ರಿ ಸರ್ಕಾರದಲ್ಲಿ ಹೆಚ್. ಡಿ ಕುಮಾರಸ್ವಾಮಿ ಒಪ್ಪಲಿಲ್ಲ ಎಂದರು.

ಪಠ್ಯದಿಂದ ದೇಶಪ್ರೇಮಿ ಭಗತ್ ಸಿಂಗ್ ಅವರ ವಿಷಯವನ್ನ ತೆಗೆದು ಹಾಕಿದ್ದಾರೆ.  ಆರ್ ಎಸ್ ಎಸ್ ಸಂಸ್ಥಾಪಕ .ಹೆಡ್ಗೆವಾರ್ ಪಠ್ಯ ಸೇರಿಸಿದ್ದಾರೆ.  ಹೆಡ್ಗೆವಾರ್ ಜಾತಿ ವ್ಯವಸ್ಥೆ ಗೆ ಧ್ವನಿ ಕೊಟ್ಟವನು ಎಂದು ಕಿಡಿಕಾರಿದರು.

Key words:  Siddaramaiah-expressed -desire – become- CM -again.