Friday, July 31, 2026

BDA Apartments

Home Front Page ಸ್ವಾಮೀಜಿಗಳಿಗೆ ಸಿದ್ಧರಾಮಯ್ಯರಿಂದ ಅಪಮಾನ: ಕ್ಷಮೆಯಾಚಿಸುವಂತೆ ಸಚಿವ ಶ್ರೀರಾಮುಲು ಆಗ್ರಹ.

ಸ್ವಾಮೀಜಿಗಳಿಗೆ ಸಿದ್ಧರಾಮಯ್ಯರಿಂದ ಅಪಮಾನ: ಕ್ಷಮೆಯಾಚಿಸುವಂತೆ ಸಚಿವ ಶ್ರೀರಾಮುಲು ಆಗ್ರಹ.

ಬಳ್ಳಾರಿ,ಮಾರ್ಚ್,27,2022(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಸ್ವಾಮೀಜಿಗಳಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಕೂಡಲೇ ಸಿದ್ಧರಾಮಯ್ಯ ಕ್ಷಮೆಯಾಚಿಸಬೇಕು ಎಂದು ಸಚಿವ ಶ್ರೀರಾಮುಲು ಆಗ್ರಹಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ವಿಪಕ್ಷ ನಾಯಕ ಸಿದ್ದರಾಮಯ್ಯ ಪರಿಸ್ಥಿತಿ ತುಘಲಕ್ ರೀತಿ ಆಗಿದೆ. ಸಿದ್ಧರಾಮಯ್ಯ ಪರಿಸ್ಥಿತಿ ನೆನೆಸಿಕೊಂಡರೆ ನೋವಾಗುತ್ತೆ. ಅವರ ನಾಲಿಗೆ, ಅವರ ಮಾತುಗಳ ಮೇಲೆ ಹಿಡಿತ ಇಲ್ಲ. ಸಿದ್ದರಾಮಯ್ಯ ಬುದ್ಧಿವಂತರು ಅಂದುಕೊಂಡಿದ್ದಾರೆ. ಸಿದ್ದರಾಮಯ್ಯ ಅಹಂಕಾರದಿಂದ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಗುರುಪರಂಪರೆಗೆ ಅವಮಾನ ಮಾಡಿದ್ದಾರೆ. ಅವರು ಕ್ಷಮೆಯಾಚಿಸಬೇಕು ಎಂದರು.

ಸಿದ್ದರಾಮಯ್ಯನವರ ಆತ್ಮವಿಶ್ವಾಸ ಇತ್ತೀಚಿಗೆ ಕಡಿಮೆ ಆಗಿದೆ. ಅವರಿಗೆ ಖಿನ್ನತೆಯಲ್ಲಿ ಇದ್ದಂತೆ ಕಾಣುತ್ತೆ.  ಕಾಂಗ್ರೆಸ್ ನಲ್ಲಿ ಸಿದ್ಧರಾಮಯ್ಯ ಏಕಾಂಗಿ ಆಗಿದ್ದಾರೆ.  ಪಕ್ಷದ ವ್ಯವಸ್ಥೆ ವಿರುದ್ದ ಅವರ ಶಾಸಕರು ಒಂಟಿಯಾಗಿದ್ದಾರೆ. ಸಿದ್ದರಾಮಯ್ಯ ಕಡೆ ಹೋದರೆ ಡಿಕೆ ಶಿವಕುಮಾರ್ ಗೆ ಸಿಟ್ಟು. ಡಿಕೆಶಿಗೆ ಕಡೆ ಹೋದರೆ ಸಿದ್ದರಾಮಯ್ಯಗೆ ಸಿಟ್ಟು ಬರುತ್ತೆ ಎಂದು ಲೇವಡಿ ಮಾಡಿದರು.

Key words: former CM-Siddaramaiah-minister-shriramulu