Monday, September 21, 2026

BDA Apartments

ಸಿದ್ಧರಾಮಯ್ಯ ಸಾಧು ಸಂತರನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ – ಸಚಿವ ಕೆ.ಎಸ್...
Home Front Page ಸಿದ್ಧರಾಮಯ್ಯ ಸಾಧು ಸಂತರನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ – ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ.

ಸಿದ್ಧರಾಮಯ್ಯ ಸಾಧು ಸಂತರನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ – ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ.

ಬೆಂಗಳೂರು,ಮಾರ್ಚ್,27,2022(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದು ಹಿಂದೂಗಳು ಎಲ್ಲರೂ ಒಗ್ಗಟ್ಟಾಗಿದ್ದೇವೆ: ಹಿಂದೂಗಳನ್ನ ಒಡೆಯುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ,  ವೀರಶೈವ ಲಿಂಗಾಯಿತ ಜಾತಿ ಒಡೆದಿದ್ದಾಯ್ತು . ಈಗ ಸ್ವಾಮೀಜಿಗಳ ಮಧ್ಯೆ  ಬಿರುಕು ತರುವ ಕೆಲಸ ಮಾಡುತಿದ್ದಾರೆ.  ಈಗ ಸಾಧು ಸಂತರನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಿದ್ಧರಾಮಯ್ಯನ ಮಾತನ್ನ ಕಾಂಗ್ರೆಸ್ ಕೇಳಲ್ಲ.  ಹಿಂದುಗಳೆಲ್ಲಾ ಒಗ್ಗಟ್ಟಾಗಿದ್ದೇವೆ ಹಿಂದೂಗಳನ್ನ ಒಡೆಯುವ ಕೆಲಸ ಮಾಡಬೇಡಿ.  ಒಮ್ಮೇ ಸೋತರು ಸಿದ್ಧರಾಮಯ್ಯಗೆ ಬುದ್ದಿ ಬಂದಿಲ್ಲ ಎಂದು ಗುಡುಗಿದರು.

ವಿದ್ಯಾರ್ಥಿಗಳು ಹಿಜಾಬ್ ಬೇಕೆ ಬೇಕು ಎಂದಿದ್ರು. ವಿದ್ಯಾರ್ಥಿಗಳಿಗೆ ಸಿದ್ಧರಾಮಯ್ಯ ಬುದ್ದಿ ಹೇಳಬಹುದಿತ್ತು. ಹಾಗ್ ಮಾಡಬೇಡಿ ಶಿಕ್ಷಣ ಮುಖ್ಯ ಅನ್ನಬಹುದಿತ್ತು. ಸಿದ್ಧರಾಮಯ್ಯ ಒಂದೇ ಒಂದು ಮಾತು ಹೇಳಲಿಲ್ಲ ಯಾಕೆ..?  ಎಂದು ಸಚಿವ ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದರು.

Key words: former CM-Siddaramaiah-Minister -KS Eshwarappa