Wednesday, August 5, 2026

BDA Apartments

Home Front Page ಟಿಪ್ಪು ರೈಲಿನ ಹೆಸರು ಬದಲಾಯಿಸಿಯೇ ತೀರುತ್ತೇವೆ – ಸಂಸದ ಪ್ರತಾಪ್ ಸಿಂಹ.

ಟಿಪ್ಪು ರೈಲಿನ ಹೆಸರು ಬದಲಾಯಿಸಿಯೇ ತೀರುತ್ತೇವೆ – ಸಂಸದ ಪ್ರತಾಪ್ ಸಿಂಹ.

ಮೈಸೂರು,ಫೆಬ್ರವರಿ,13,2022(www.justkannada.in): ಟಿಪ್ಪು ಸುಲ್ತಾನ್ ಒಂದು ಹಳಿಯನ್ನು ಹಾಕಿಲ್ಲ. ಹೀಗಾಗಿ ಟಿಪ್ಪು ರೈಲಿನ ಹೆಸರನ್ನ ಒಡೆಯರ್ ಎಂದು ನಾಮಕರಣ ಮಾಡಿಯೇ ತೀರುತ್ತೇವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಟಿಪ್ಪು ರೈಲಿನ ಹೆಸರು ಬದಲಾಯಿಸುವಂತೆ ಈ ಬಗ್ಗೆ ಸಾಕಷ್ಟು ಜನರು ಮನವಿ ಮಾಡಿದ್ದರು . ಮೈಸೂರು ಒಡೆಯರ್ ಕೊಡೆಗೆ ಅಪಾರವಾಗಿದೆ.  ಮೈಸೂರಿಗೆ ರೈಲು ತಂದವರು ಮೈಸೂರು ಅರಸರು. ಅವರ ಹೆಸರಿನಲ್ಲಿ ಒಂದು ರೈಲು ಸಹ ಇಲ್ಲ . ಈ ವಂಶ ನಿರ್ವಂಶ ಮಾಡಿಲು ಹೋದವನ ಹೆಸರು ಯಾಕೆ…? ಅಲ್ಲದೆ  ಟಿಪ್ಪು ಸುಲ್ತಾನ್ ಒಂದು ಹಳಿಯನ್ನು ಹಾಕಿಲ್ಲ.   ಹೀಗಾಗಿ ರೈಲಿನ ಹೆಸರು ಬದಲಾಯಿಸಿಯೇ ತೀರುತ್ತೇವೆ ಎಂದರು.

ಇನ್ನು ಇದೇ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಹೊಗಳಿದ ಸಂಸದ ಪ್ರತಾಪ್ ಸಿಂಹ,  ಬಿಎಸ್ ವೈ ವಿಷಕಂಠನಿದ್ದಂತೆ.  ಬಿಎಸ್ ವೈ ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಇತ್ತು. ಪ್ರವಾಹ ಕೋವಿಡ್ ನಿಂದ ರಾಜ್ಯದ ಜನ ತತ್ತರಿಸಿದ್ದರು. ಈ ವೇಳೆ ಬಿಎಸ್ ವೈ ಎಲ್ಲಾ ಕಡೆ ಒಬ್ಬರೇ ಓಡಾಡಿ ಕೆಲಸ ಮಾಡಿದ್ದರು.  ಅವರು ಜೀವ ಕಾಪಾಡಿದ್ರು ನಾವು ಜೀವನ ಕಾಪಾಡುತ್ತೇವೆ ಎಂದು ತಿಳಿಸಿದರು.

Key words: name -change-Tipu -train- Prathap simha