Sunday, August 2, 2026

BDA Apartments

Home Crime CRIME LADY : ಒಂದೇ ಕುಟುಂಬದ ಐವರ ಹತ್ಯೆ : 24 ಗಂಟೆಗಳಲ್ಲೇ ಕೊಲೆ...

CRIME LADY : ಒಂದೇ ಕುಟುಂಬದ ಐವರ ಹತ್ಯೆ : 24 ಗಂಟೆಗಳಲ್ಲೇ ಕೊಲೆ ಪಾತಕಿ ಅಂದರ್.

 

ಮಂಡ್ಯ, ಫೆ.09, 2022 : (www.justkannada.in news ) ಮಹಿಳೆ ಸೇರಿದಂತೆ ಒಂದೇ ಕುಟುಂಬದ ಐವರ ಹತ್ಯೆ ಪ್ರಕರಣದ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು. ಮೃತರ ಸಂಬಂಧಿ ಲಕ್ಷ್ಮೀ ಎಂಬಾಕೆಯೇ ಬಂಧಿತ ಆರೋಪಿ ಮಹಿಳೆ.

ಮೃತ ಲಕ್ಷ್ಮೀ ಪತಿ ಗಂಗಾರಾಮ್ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿ. ತನ್ನ ಅಕ್ರಮಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಹತ್ಯೆ. ಪೊಲೀಸರ ಪ್ರಾಥಮಿಕ ತನಿಖೆಯಿಂದ ವಿಷಯ ಬಹಿರಂಗ.

ಮೈಸೂರಿನ ಬೆಲವತ್ತದಲ್ಲಿ ವಾಸವಿದ್ದ ಆರೋಪಿ ಲಕ್ಷ್ಮೀ. ಹತ್ಯೆ ದಿನ ಕಣ್ಣೀರಿಟ್ಟಿದ್ದಳು. ಮೃತರ ಮನೆ ಮುಂದೆಯೇ ಕಣ್ಣೀರಿಟ್ಟು ಗೋಳಾಡಿದ್ದಳು. ತಾನೇ ಹತ್ಯೆ ಮಾಡಿದ್ದರೂ ಏನು ಗೊತ್ತಿಲ್ಲದಂತೆ ನಾಟಕವಾಡಿದ್ದ ಆರೋಪಿ ಲಕ್ಷ್ಮಿ.

ಫೆ.6 ಮದ್ಯರಾತ್ರಿ ಮಾರಕಾಸ್ತ್ರದಿಂದ ಮನೆಯಲ್ಲಿದ್ದ ಎಲ್ಲರನ್ನು ಹತ್ಯೆ ಮಾಡಿ ಪರಾರಿ. ಘಟನೆ ಬಳಿಕ ಮತ್ತೆ ಬೆಳಿಗ್ಗೆ ಮೃತರ ಮನೆಯ ಬಳಿ ಕುಳಿತು ಕಣ್ಣೀರಿಟ್ಟಿದ್ದ ಪಾತಕಿ.

ಆರೋಪಿಯ ಕೃತ್ಯ ಕೇಳಿ ಬೆಚ್ಚಿ ಬಿದ್ದಿದ್ದ ಪೊಲೀಸರು, ಜಿಲ್ಲೆಯ ಜನರು. ಆರೋಪಿಯನ್ನು ಮತ್ತಷ್ಟು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿರುವ ಪೊಲೀಸರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಗ್ರಾಮದಲ್ಲಿ ನಡೆದಿದ್ದ ಹತ್ಯೆ.

ಹೈಟೆಕ್ ಟೆಕ್ನಾಲಜಿ ಬಳಸಿ ಆರೋಪಿ ಬಂಧಿಸಿದ ಕೆ.ಆರ್.ಎಸ್ ಪೊಲೀಸರು‌. ಸಿಸಿಟಿವಿ ಫುಟೇಜ್, ಕರೆ ಜಾಡು ಆಧರಿಸಿ ಆರೋಪಿ ಬಂಧನ. ಆದಿನದ ಮೊಬೈಲ್ ಟವರ್ ಕರೆ, ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಆಧರಿಸಿ ಬಂಧನ. ಕೊಲೆ ಮಾಡಿ ಬಳಿಕ ಸ್ಕೂಟರ್ ನಲ್ಲಿ ತೆರಳಿದ್ದ ಪಾತಕಿ. ಪಾತಕಿಯ ದೃಶ್ಯ ಸುತ್ತಮುತ್ತಲ ಸಿಸಿಟಿವಿಯಲ್ಲಿ ಸೆರೆ.

KEY WORDS : mandya-murder-police