ಪಕ್ಕದ ರಾಜ್ಯದ ವಿವಾದ ತಮಿಳುನಾಡಿಗೆ ಬರೋದು ಬೇಡ- ಹಿಜಾಬ್ ವಿವಾದ ಕುರಿತು ಕಮಲ್ ಹಾಸನ್ ಟ್ವೀಟ್.

ಚೆನ್ನೈ,ಫೆಬ್ರವರಿ,9,2022(www.justkannada.in): ಕರ್ನಾಟಕದಲ್ಲಿ ಹಿಜಾಬ್, ​ಕೇಸರಿ ಶಾಲು ವಿವಾದ ಭುಗಿಲೆದ್ದಿದ್ದು ಕರುನಾಡಿನ ಕಾಲೇಜುಗಳ ಅಂಗಳದಲ್ಲಿ ಶುರುವಾದ ಈ ಗಲಾಟೆ ಈಗ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ, ಈ ಕುರಿತು ಅನೇಕ ವ್ಯಕ್ತಿಗಳು ಪ್ರತಿಕ್ರಿಯಿಸುತ್ತಿದ್ದು,  ಬಹುಭಾಷ ನಟ ಕಮಲ್​ ಹಾಸನ್​ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ

‘ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಅಶಾಂತಿಯನ್ನ ಹುಟ್ಟುಹಾಕಿದೆ.  ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ ಗೋಡೆ ನಿರ್ಮಾಣವಾಗುತ್ತಿದೆ. ಪಕ್ಕದ ರಾಜ್ಯದಲ್ಲಿ ನಡೆಯುತ್ತಿರುವ ವಿವಾದ ತಮಿಳುನಾಡಿಗೆ ಬರಬಾರದು. ಪ್ರಗತಿಪರ ಶಕ್ತಿಗಳು ಈಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

Key words: Karnataka-hijab-Tamil Nadu- Kamal Haasan