‘ಅತ್ಯಾಚಾರ ಹೆಚ್ಚಲು ಮಹಿಳೆಯರ ಡ್ರೆಸ್ ಕಾರಣ’: ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆ ಕೇಳಿದ ಶಾಸಕ ಎಂಪಿ ರೇಣುಕಾಚಾರ್ಯ.

ನವದೆಹಲಿ,ಫೆಬ್ರವರಿ,9,2022(www.justkannada.in): ಅತ್ಯಾಚಾರ ಹೆಚ್ಚಲು ಮಹಿಳೆಯರ ಡ್ರೆಸ್ ಕಾರಣ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿ ಬಳಿಕ. ಕ್ಷಮೆ ಕೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರ ಬಟ್ಟೆಯಿಂದ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ. ಹೆಣ್ಣುಮಕ್ಕಳು ಮೈತುಂಬಾ ಬಟ್ಟೆ ಹಾಕಿಕೊಂಡು ಬರಬೇಕು  ಮಹಿಳೆಯರನ್ನ ತಾಯಿ ಸ್ಥಾನದಲ್ಲಿ ನೋಡುತ್ತೇವೆ ಎಂದರು.

ಪ್ರಿಯಾಂಕಾ ಗಾಂಧಿ ಬಿಕನಿ ಪದ ಬಳಸಿದ್ದು ತಪ್ಪು.  ಇದು ಕೀಳುಮಟ್ಟದ ಹೇಳಿಕೆ. ಪ್ರಿಯಾಂಕಾ ಗಾಂಧಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.  ಹಾಗೆಯೇ ರಾಜಕಾರಣದಲ್ಲಿ ನಾವು ಕೇಸರಿಕರಣ ಮಾಡುತ್ತೇವೆ ಶಿಕ್ಷಣದಲ್ಲಿ ನಾವು ಕೇಸರಿಕರಣ ಮಾಡಲ್ಲ ಎಂದರು.

ಇನ್ನು ಅತ್ಯಾಚಾರ ಹೆಚ್ಚಲು ಮಹಿಳೆಯರ ಡ್ರೆಸ್ ಕಾರಣ ಎಂಬ ಹೇಳಿಕೆ ನೀಡಿ ಟೀಕೆಗೆ ಗುರಿಯಾದ ಶಾಸಕ ಎಂಪಿ ರೇಣುಕಾಚಾರ್ಯ ನಂತರ  ನನ್ನ ಹೇಳಿಕೆಯಿಂದ ನೋವಾಗಿದ್ದರೇ ಕ್ಷಮೆ ಇರಲಿ ಎಂದು ಕ್ಷಮೆಯಾಚಿಸಿದರು.

Key words: bjp-MLA-MP Renukacharya

ENGLISH SUMMARY….

Women’s dresses reason behind rape: BJP MLA gives controversial statement and then apologizes
New Delhi, February 9, 2022 (www.justkannada.in): BJP MLA M.P. Renukacharya gave a controversial statement saying ‘the dresses worn by the women is the reason behind rapes,’ and then apologizes.
Speaking in New Delhi today, he expressed his view that a few women will wear provocative dresses, and as a result, men will get provoked. “The provocative dresses worn by women are the reason behind rapes. Women should wear decent dresses we will look at them as mothers,” he said.
He also stated that the word ‘Bikini’ used by Congress leader Priyanka Gandhi is wrong, and demanded that she apologizes to the people of the country. “We may saffronize politics, but not education,” he added.
Later he also apologized for his words ‘women’s dresses are the reason behind rapes.’
Keywords: BJP MLA/ M.P.Renukacharya/ women/ dress/ provocative/ reason/ rape