Sunday, August 23, 2026

BDA Apartments

Home Cinema ‘ವಿಕ್ರಾಂತ್ ರೋಣ’ ಒಒಟಿಯಲ್ಲಿ ರಿಲೀಸ್ ಮಾಡಲು ಬರೋಬ್ಬರಿ 100 ಕೋಟಿ ಆಫರ್ !?

‘ವಿಕ್ರಾಂತ್ ರೋಣ’ ಒಒಟಿಯಲ್ಲಿ ರಿಲೀಸ್ ಮಾಡಲು ಬರೋಬ್ಬರಿ 100 ಕೋಟಿ ಆಫರ್ !?

ಬೆಂಗಳೂರು, ಜನವರಿ 08, 2022 (www.justkannada.in): ಎಲ್ಲ ಅಂದುಕೊಂಡಂತೆ ನಡೆದರೆ ಕಿಚ್ಚ ಸುದೀಪ್ ನಟನೆಯ  ವಿಕ್ರಾಂತ್ ರೋಣ ಸಿನಿಮಾವನ್ನು 2022ರ ಫೆಬ್ರವರಿ 24ರಂದು ರಿಲೀಸ್​ ಮಾಡಲಾಗುತ್ತಿದೆ.

ವಿಶೇಷ ಎಂದರೆ  ಸಿನಿಮಾಗೆ ಓಟಿಟಿಯಿಂದ ಭರ್ಜರಿ ಆಫರ್ ಬಂದಿದೆಯಂತೆ. ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲು ದಾಖಲೆ ಮೊತ್ತದ ಆಫರ್​ ಬಂದಿದೆ ಎಂದು ಮೂಲಗಳು ತಿಳಿಸಿವೆ.

3ಡಿ ತಂತ್ರಜ್ಞಾನದಲ್ಲಿ ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಪ್ಯಾನ್‌ ಇಂಡಿಯಾ ಚಿತ್ರ ‘ವಿಕ್ರಾಂತ್‌ ರೋಣ’ದ ನೇರ ಪ್ರಸಾರ ಹಕ್ಕುಗಳಿಗಾಗಿ ಎರಡು ಒಟಿಟಿ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ  ಎನ್ನಲಾಗಿದೆ.

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಇಂಗ್ಲಿಷ್‌ ಭಾಷೆಯಲ್ಲೂ ನೇರವಾಗಿ ಒಟಿಟಿಯಲ್ಲಿ ಪ್ರಸಾರ ಮಾಡಲು ಓಟಿಟಿ ಆಫರ್‌ ನೀಡಿದೆ. ಚಿತ್ರಕ್ಕೆ ಬರೋಬ್ಬರಿ ನೂರು ಕೋಟಿ ರುಪಾಯಿ ನೀಡಲು ಮುಂದೆ ಬಂದಿದೆ ಎಂದು ಹೇಳಲಾಗುತ್ತಿದೆ.